
ಆಗಸ್ಟ್ 15 ಕ್ಕೆ ಗೌರಿ ಸಿನಿಮಾ ತೆರೆ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದು, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಹೀರೋ ಆಗಿ ಡೆಬ್ಯು ಆಗುತ್ತಿದ್ದಾರೆ. ಆ ಕಡೆ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಿದ್ದ ಬೆಂಕಿ ಬ್ಯುಟಿ ಸಾನ್ಯ ಅಯ್ಯರ್ ಗೂ ಇದು ಫಸ್ಟ್ ಸಿನಿಮಾ. ಗೌರಿ ಮೂಲಕ ಬಿಗ್ ಸ್ಟಾರ್ ಆಗೋ ಕನಸು ಕಾಣುತ್ತಿರೋ ಸಮರ್ಜಿತ್ ಲಂಕೇಶ್ ಬೆನ್ನ ಹಿಂದೆ ಇಬ್ಬರು ಕನ್ನಡದ ಬಿಗ್ ಸ್ಡಾರ್ ನಿಂತಿದ್ದಾರೆ. ಅವರೇ ಬಾದ್ ಷಾ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ. ಬಾದ್ ಷಾ ಕಿಚ್ಚ ಸುದೀಪ್‌ರವರು ಗೌರಿ ಹಾಗೂ ಸಮರ್ಜಿತ್ ಲಂಕೇಶ್ ನ ಬಿಗ್ ಸ್ಕ್ರೀನ್ ಮೇಲೆ ನೋಡೋಕೆ ಕಾಯುತ್ತಿದ್ದಾರೆ. ಹೀಗಾಗಿ ಕೆಲ ದಿನಗಳ ಹಿಂದಷ್ಟೇ ಗೌರಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋಕೆ ಬಂದಿದ್ದ ಸುದೀಪ್ ಸಮರ್ಜಿತ್ ಬೆನ್ನು ತಟ್ಟಿ ಗೌರಿ ಟ್ರೈಲರ್ ರಿಲೀಸ್ ಮಾಡಿದ್ರು.
ಈಗ ರಿಯಲ್ ಸ್ಟಾರ್ ಉಪೇಂದ್ರ ಗೌರಿ ಗೆಲ್ಲಬೇಕು ಸರ್ಮರ್ಜಿತ್ ಕಟೌಟ್ ಥಿಯೇಟರ್ ಮುಂದೆ ನಿಲ್ಲಬೇಕು ಅಂತ ಹೇಳಿದ್ದಾರೆ. ಅದು ಗೌರಿ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ. ಸಮರ್ಜಿತ್ ರ ಗೌರಿ ಸಿನಿಮಾದ ಟೈಮ್ ಬರುತ್ತೆ ಹಾಡಿಗೆ ಡಾನ್ಸ್ ಮಾಡಿದ್ದ ಉಪೇಂದ್ರ ಗೌರಿ ಬಗ್ಗೆಯೂ ಮಾತನಾಡಿದ್ದಾರೆ. ಬೆಂಗಳೂರಿನ ಮಾಲ್ ಒಂದರಲ್ಲಿ ಗೌರಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿದೆ. ಇಲ್ಲಿಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದ ಉಪೇಂದ್ರ ತನ್ನ ಸಿನಿಮಾದ ಹಾಡಿಗೂ ತನ್ನ ಸಿಗ್ನೆಚರ್ ಸ್ಪೆಪ್ಸ್ ಹಾಕಿದ್ರು. ಇನ್ನೂ ಗೌರಿ ಸಿನಿಮಾದ ಕಾರ್ಯಕ್ರಮದಲ್ಲಿ ಫ್ಯಾಷನ್ ಲೋಕವೇ ಧರೆಗಿಳಿದಿತ್ತು. ಹುಡುಗ ಹುಡುಗಿಯರು ಚಂದದ ಸಂಪ್ರದಾಯಿಕ ಉಡುಗೆ ತೊಟ್ಟು ಬೆಕ್ಕಿನ ನಡುಗೆ ಪ್ರದರ್ಶಿಸಿದ್ರು. ಇವರುಗಳ ಮಧ್ಯೆ ಗೌರಿ ನಟ ಸಮರ್ಜಿತ್ ಹಾಗೂ ನಟಿ ಸಾನ್ಯ ಅಯ್ಯರ್ ರಾಜ ರಾಣಿಯಂತೆ ಕಂಗೊಳ್ಳಿಸಿದ್ರು.
Poll (Public Option)

Post a comment
Log in to write reviews