
ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅಧಿಕಾರಿಗಳು ಬಂಧಿಸಿ, 3.5 ಕೆಜಿ ಹೈಡ್ರೊಪೋನಿಕ್ ದೇಶವನ್ನು ವಶಕ್ಕೆ ಪಡೆದಿರುವ ಘಟನೆ ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ನಡೆದಿದೆ.
6E1056 ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ, ಲಗೇಜ್ ಬ್ಯಾಗ್‌ನಲ್ಲಿ ಗಾಂಜಾ ಅಡಗಿಸಿಕೊಂಡು ತಂದಿದ್ದ. ಏರ್‌ಪೋರ್ಟ್‌ನಲ್ಲಿ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದೆ. ಗಾಂಜಾ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆರೋಪಿಯಿಂದ 3.5 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶಕ್ಕೆ ಪಡೆಯಲಾಗಿದೆ. ಹೈಡ್ರೋಪೋನಿಕ್ ಗಾಂಜಾ ಎಂದರೆ ಹೈಡ್ರೋಪೋನಿಕ್ (ಜಲಕೃಷಿ) ವಿಧಾನದಿಂದ ಬೆಳೆಯುವ ಗಾಂಜಾ. ಜಲಕೃಷಿ ಎಂದರೆ ಮಣ್ಣನ್ನು ಬಳಸದೆ ನೀರಿನಲ್ಲಿ ಪೋಷಕಾಂಶಗಳನ್ನು ಬಳಸಿಕೊಂಡು ಸಸಿಗಳನ್ನು ಬೆಳೆಸುವ ಒಂದು ವಿಧಾನವಾಗಿದೆ.
Poll (Public Option)

Post a comment
Log in to write reviews