ಮುಸ್ಲಿಮರ ಉಡುಗೆ ತೊಟ್ಟ ಗಣೇಶ, ಹಿಂದೂ ಭಾವನೆಗಳಿಗೆ ಧಕ್ಕೆ, ಭುಗಿಲೆದ್ದ ವಿವಾದ

ಮಹಾರಾಷ್ರ್ಟ: ತೆಲಂಗಾಣದಲ್ಲಿ ಈ ಬಾರಿ ಗಣೇಶನ ಮೂರ್ತಿಗೆ ತೊಡಿಸಿದ್ದ ಬಟ್ಟೆಯಿಂದಾಗಿ ತೀವ್ರ ವಿವಾದ ಉಂಟಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಭಾರಿ ಬಾಜಿರಾವ್ ಮಸ್ತಾನಿ ಶೀರ್ಷಿಕೆಯಡಿ ಬಟ್ಟೆಯನ್ನು ಗಣೇಶನಿಗೆ ತೊಡಿಸಿದ್ದು, ಅದು ಮುಸ್ಲಿಮರ ಬಟ್ಟೆಯಂತಿದೆ ಎಂದು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಯಂಗ್ ಲಿಯೋಸ್ ಯೂತ್ ಅಸೋಸಿಯೇಷನ್‌ನ ಗಣೇಶನ ಪ್ರತಿಮೆಯ ಉಡುಪಿನ ಬಗ್ಗೆ ವಿವಾದ ಭುಗಿಲೆದ್ದಿದೆ. ಬಾಜಿರಾವ್ ಮಸ್ತಾನಿಯಲ್ಲಿ ನಟ ರಣವೀರ್ ಸಿಂಗ್ ಧರಿಸಿದ್ದ ಉಡುಪಿನಿಂದ ಸ್ಫೂರ್ತಿ ಪಡೆದಿದೆ. ಸಂಘಟಕರು ತಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದರು.
ನಾವು ಉದ್ದೇಶಪೂರ್ವಕವಾಗಿ ಬಾಜಿರಾವ್ ಮಸ್ತಾನಿ ಥೀಮ್ ಅನ್ನು ಆಯ್ಕೆ ಮಾಡಲಿಲ್ಲ. ದುರದೃಷ್ಟವಶಾತ್, ತಪ್ಪುಗ್ರಹಿಕೆಗೆ ಕಾರಣವಾಯಿತು.
ನಾವು ಎಂದಿಗೂ ಯಾರ ಭಾವನೆಗಳಿಗೂ ಧಕ್ಕೆ ತರುವುದಿಲ್ಲ, ಬಟ್ಟೆ ವಿನ್ಯಾಸಕಾರ ಹಾಗೂ ಕಮಿಟಿ ಸದಸ್ಯರ ನಡುವಿನ ತಪ್ಪು ಸಂವಹನ ಈ ಘಟನೆಗೆ ಕಾರಣವಾಗಿದೆ. ಗೊಂದಲದ ನಡುವೆಯೂ ಯಂಗ್ ಲಿಯೋಸ್ ಯುವಕ ಸಂಘವು ಹಬ್ಬವನ್ನು ಶಾಂತಿಯುತವಾಗಿ ನಡೆಸಲು ನಿರ್ಧರಿಸಿದೆ.
Poll (Public Option)

Post a comment
Log in to write reviews