
ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮತ್ತೊಮ್ಮೆ ಗೆದ್ದು ಬೀಗಿದೆ. ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಸತತ 5 ಬಾರಿ ಗೆಲ್ಲುವ ಮೂಲಕ ವಿಜಯದ ದಾಖಲೆ ಬರೆದಿದ್ದಾರೆ.
ನಾನು ಗಜಕೇಸರಿ ಯೋಗದಲ್ಲಿ ಜನಿಸಿರುವುದರಿಂದ ಈ ಚುನಾವಣೆಯಲ್ಲಿ ನಿಶ್ಚಿತವಾಗಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸದಲ್ಲಿದ್ದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಹೀನಾಯ ಸೋಲು ಕಂಡಿದ್ದಾರೆ.
ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಲೋಕಸಭಾ ಕ್ಷೇತ್ರದಲ್ಲಿ ಪಿಸಿ ಗದ್ದಿಗೌಡರ್ ಪ್ರಬಲ ಹಿಡಿತ ಹೊಂದಿದ್ದಾರೆ. ಹೀಗಾಗಿಯೇ ಪಕ್ಕದ ವಿಜಯಪುರ ಜಿಲ್ಲೆಯ ಪ್ರಭಾವಿ ಲಿಂಗಾಯತ ಸಚಿವ ಶಿವಾನಂದ ಪಾಟೀಲ್ ಪುತ್ರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಭರ್ಜರಿ ತಂತ್ರ ಹೆಣೆದಿತ್ತು. ಆದರೆ ಕೈ ತಂತ್ರ ಫಲ ನೀಡಿಲ್ಲ. ಹಾಲಿ ಸಂಸದ ಪಿಸಿ ಗದ್ದಿಗೌಡರ್ ಅವರು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ವಿರುದ್ಧ 6,83,99 ಮತಗಳ ಅಂತರದ ಗೆಲುವು ಕಂಡಿದ್ದಾರೆ. ಪಿಸಿ ಗದ್ದಿಗೌಡರ್ ಅವರಿಗೆ 6,71,039 ಮತ ಮತ್ತು ಸಂಯುಕ್ತಾ ಪಾಟೀಲ್ ಅವರಿಗೆ 6,02,640 ಮತ ಬಿದ್ದಿವೆ.
Poll (Public Option)

Post a comment
Log in to write reviews