
ಮೈಸೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ, ಮಳೆ ಹಾನಿಗೆ ನಾಶವಾದ ಬೆಳೆಯನ್ನು ವೀಕ್ಷಿಸಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಕೆ.ಮಹದೇವು ಸೇರಿದಂತೆ ಜೆಡಿಎಸ್ ಮುಖಂಡರು ಪಿರಿಯಾಪಟ್ಟಣ ತಾಲೂಕಿನ ಚಪ್ಪದರಹಳ್ಳಿ, ಹಾರನಹಳ್ಳಿ ಭಾಗಗಳಿಗೆ ಭೇಟಿ ಮಾಡಿದರು. ಗೋರಹಳ್ಳಿ ಗ್ರಾಮದ ರೈತ ಮಹಿಳೆ ಶಿಲ್ಪಾ, ಜಮೀನಿನಲ್ಲಿ ತಂಬಾಕು ಬೆಳೆದಿದ್ದರು. ಧಾರಾಕಾರ ಮಳೆಗೆ ತಂಬಾಕು ಬೆಳೆ ನಾಶವಾಗಿತ್ತು. ಪರಿಹಾರಕ್ಕಾಗಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ತಂಬಾಕು, ಶುಂಠಿ ನಷ್ಟ ಆಗಿರುವ ಜಮೀನುಗಳನ್ನು ವೀಕ್ಷಿಸಿದ ಎಚ್‌ಡಿ ಕುಮಾರ್ ಸ್ವಾಮಿಯವರು, ರೈತ ಮಹಿಳೆಗೆ ಸ್ಥಳದಲ್ಲೇ 50 ಸಾವಿರ ಧನಸಹಾಯ ಮಾಡಿದರು. ಕುಮಾರಸ್ವಾಮಿಯವರ ಸಾಥ್‌ನಿಂದ ಸಂತಸಗೊಂಡ ರೈತ ಮಹಿಳೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
Poll (Public Option)

Post a comment
Log in to write reviews