
ನವದೆಹಲಿ: ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜೂನ್ 18ರಂದು ಬಿಡುಗಡೆಗೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾರಾಣಸಿಗೆ ಭೇಟಿ ನೀಡಿದ ಬಳಿಕ ಈ ಯೋಜನೆಯ 9.26 ಕೋಟಿ ಫಲಾನುಭವಿ ರೈತರಿಗೆ ತಲಾ 2,000 ರೂನಂತೆ ಒಟ್ಟು 20,000 ಕೋಟಿ ಹಣವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
2019 ರಲ್ಲಿ ಆರಂಭವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಕೃಷಿ ಕಾರ್ಯಕ್ಕೆ ಧನಸಹಾಯ ಒದಗಿಸುವ ಉದ್ದೇಶ ಹೊಂದಿದ್ದು ತಲಾ 2,000 ರೂಪಾಯಿಯಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈವರೆಗೂ 16 ಕಂತುಗಳನ್ನು ಸರ್ಕಾರ ನೀಡಿದ್ದು ಇದೇ ಜೂನ್ 18ರಂದು 17ನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಎಂದು ಮೂಲಗಳು ತಿಳಿಸಿವೆ.
Poll (Public Option)

Post a comment
Log in to write reviews