
ಅಬುಜಾ: ಉತ್ತರ ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು 147 ಜನರು ಸಾವನ್ನಪ್ಪಿದ್ದು, 70 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಗಾವಾ ರಾಜ್ಯದ ಮಜಿಯಾ ಎಂಬ ಹಳ್ಳಿಯಲ್ಲಿ ತಡರಾತ್ರಿ ವಾಹನ ಅಪಘಾತಕ್ಕೀಡಾಗಿತ್ತು. ಸ್ಥಳೀಯರು ಇಂಧನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಸ್ಫೋಟವು ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿತ್ತು. ಒಳಚರಂಡಿ ಕಂದಕಕ್ಕೆ ಇಂಧನ ಚೆಲ್ಲಿತ್ತು. ಸ್ಥಳೀಯ ನಿವಾಸಿಗಳು ಇಂಧನ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಜಿಗಾವಾ ಪೊಲೀಸ್ ವಕ್ತಾರ ಶಿಸು ಲಾವನ್ ಆಡಮ್ ಹೇಳಿದ್ದಾರೆ.
Poll (Public Option)

Post a comment
Log in to write reviews