2024-12-24 07:08:05

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇಂಧನ ಮರುಬಳಕೆಗೆ ಉತ್ಪಾದನೆಗೆ ಆದ್ಯಾತೆ : ಎಂ. ಬಿ.ಪಾಟೀಲ್

ದೊಡ್ಡಬಳ್ಳಾಪುರ : ಕರ್ನಾಟಕವು ಮರುಬಳಕೆ ಮಾಡಬಹುದಾದ ಇಂಧನ ಉತ್ಪಾದನೆಗೆ ಒತ್ತು ಕೊಟ್ಟಿದ್ದು, ಸುಸ್ಥಿರ ಅಭಿವೃದ್ಧಿ ಸಾಧಿಸಲು ಇದೊಂದು ಪ್ರಮುಖ ಗುರಿಯಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ.ಪಾಟೀಲ್ ಹೇಳಿದ್ದಾರೆ.

ದೊಡ್ಡಬಳ್ಳಾಪುರ ಸಮೀಪ  ಇರುವ ಅಮೆರಿಕ ಮೂಲದ ಓಮಿಯಂ ಕಂಪನಿ ಸ್ಥಾಪಿಸಿರುವ ದೇಶದ ಪ್ರಪ್ರಥಮ ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಓಮಿಯಂ ಕಂಪನಿಯು 2 ಸಾವಿರ ಕೋಟಿ ಹೂಡಿಕೆ ಮಾಡಿ ಪ್ರಾರಂಭಿಸಿರುವುದು ಸ್ವಾಗತಾರ್ಹ ಎಂದರು.

ಇಲ್ಲಿ ಸದ್ಯಕ್ಕೆ ವರ್ಷಕ್ಕೆ 500 ಮೆಗಾವ್ಯಾಟ್ ಗ್ರೀನ್ ಹೈಡ್ರೋಜನ್ ಉತ್ಪಾದನೆ ಅಗಲಿದ್ದು, ಹಂತಹಂತವಾಗಿ 2,000 ಮೆಗಾವ್ಯಾಟ್ ಮಟ್ಟಕ್ಕೆ ಏರಿಸಲಾಗುವುದು. ಕಂಪನಿಯ ಉತ್ಪಾದನಾ ಚಟುವಟಿಕೆಯಿಂದ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿವೆ ಎಂದರು. ನೀರಿನಿಂದ ತಯಾರಾಗುವ ಗ್ರೀನ್-ಹೈಡ್ರೋಜನ್ ಅನ್ನು ಕಿಲೋಗ್ರಾಂ ಲೆಕ್ಕದಲ್ಲಿ ಅಳತೆ ಮಾಡಲಾಗುವುದು. ಇದರ ಸಂಗ್ರಹಣೆ ಮತ್ತು ಸಾಗಣೆ ಕೂಡ ಸುಲಭವಾಗಿದೆ. ಇದನ್ನು ರಸಗೊಬ್ಬರ ಮತ್ತು ಉಕ್ಕು ಉತ್ಪಾದನೆ, ವಾಹನಗಳಲ್ಲಿ ಎಥನಾಲ್ ಜೊತೆ ಮಿಶ್ರಣವಾಗಿ, ಸಂಸ್ಕರಣೆ ಪ್ರಕ್ರಿಯೆಗಳಲ್ಲಿ ಧಾರಾಳವಾಗಿ ಉಪಯೋಗಿಸಬಹುದು ಎಂದು ವಿವರಿಸಿದರು.

ರಾಜ್ಯವು ಕೈಗಾರಿಕಾ ಸ್ನೇಹಿಯಾಗಿದ್ದು, ಜಗತ್ತಿನ ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು ಇಲ್ಲಿ ನೆಲೆಯೂರಿವೆ. ದೇಶದ ಆರ್ಥಿಕತೆಯನ್ನು 2030ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಲ್ಲಿ ರಾಜ್ಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಪರಿಸರಸ್ನೇಹಿ ಹಾಗೂ ಮರುಬಳಕೆ ಮಾಡಬಹುದಾದ ಇಂಧನಗಳ ಉತ್ಪಾದನೆ ಭರದಿಂದ ನಡೆಯುತ್ತಿದೆ. ಇದನ್ನು ನಾವು ಪ್ರಮುಖ ವಲಯವಾಗಿ ಗುರುತಿಸಿದ್ದೇವೆ. ರಚನಾತ್ಮಕ ಉಪಕ್ರಮಗಳ ಫಲವಾಗಿ ರಾಜ್ಯವು 2016ರಿಂದಲೂ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.

 

Post a comment

No Reviews