ಬೆಂಗಳೂರು :ಸ್ವಾತಂತ್ರ ದಿನಾಚರಣೆ ಪ್ರಯುಕ್ತ 12 ದಿನಗಳ ಕಾಲ ಲಾಲ್ ಬಾಗ್ ನಲ್ಲಿ ಪ್ಲವರ್ ಶೋ ಏರ್ಪಡಿಸಲಾಗಿದೆ ಪ್ಲವರ್ ಶೋ ವೀಕ್ಷಿಸಲು ಲಕ್ಷಾಂತರ ಜನರು ಭೇಟಿ ನೀಡುವ ಹಿನ್ನಲೆ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗು ಸುತ್ತಮುತ್ತಲಿನ ರಸ್ತೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಹಾಗು 4 ಕಡೆ ವಾಹನ ಸಂಚಾರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಸಾಧ್ಯಾವಾದಷ್ಟು ಬಿಎಂಟಿಸಿ ಬಸ್ ಮೆಟ್ರೋ ಕ್ಯಾಬ್‌ಗಳನ್ನು ಬಳಸಲು ಸಂಚಾರಿ ಪೋಲಿಸರು ಮನವಿ ಮಾಡಿಕೊಂಡಿದ್ದಾರೆ.
ವಾಹನಗಳ ನಿಲುಗಡೆಗೆ ಅವಕಾಶ
1. ಮರಿಗೌಡ ರಸ್ತೆಯ ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ಬೈಕ್ ಪಾರ್ಕಿಂಗ್ ವ್ಯಸ್ಥೆ
2. ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ ವ್ಯವಸ್ಥೆ
3. ಮರಿಗೌಡ ರಸ್ತೆಯ ಹಾಪ್ ಕಾಮ್ಸ್ ನಲ್ಲಿ ಬೈಕ್ ಹಾಗೂ ಕಾರು ನಿಲುಗಡೆ ವ್ಯವಸ್ಥೆ
4. ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಹಾಗೂ ಕಾರು ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಪಾರ್ಕಿಂಗ್ ನಿಷೇಧ
1. ಡಾ: ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿ
2. ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿ
3. ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಭಾಗ್ ಮುಖ್ಯದ್ವಾರದ ವರೆಗೆ
4. ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ ವರೆಗೆ
5. ಬಿಟಿಎಸ್ ಬಸ್ ಸ್ಟಾಪ್ ಬಿಎಂಟಿಸಿ ಜಂಕ್ಷನ್ ನಿಂದ ರಸ್ತೆಯ ಎರಡೂ ಬದಿಗಳಲ್ಲಿ.
6. ಕೃಂಬಿಗಲ್ ರಸ್ತೆಯ ಎರಡೂ ಕಡೆಗಳಲ್ಲಿ.
7. ಲಾಲ್‌ಬಾಗ್ ವೆಸ್ಟ್ಗೇಟ್‌ನಿಂದ ಆರ್.ವಿ. ಟೀರ‍್ಸ್ ಕಾಲೇಜ್‌ವರೆಗೆ
8. ಆರ್‌ವಿ ಟೀರ‍್ಸ್ ಕಾಲೇಜ್‌ನಿಂದ ಅಶೋಕ ಪಿಲ್ಲರ್ ವರೆಗೆ
9. ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ. ಪಾರ್ಕಿಂಗ್ ನಿಷೇಧಿಸಲಾಗಿದೆ.
Post a comment
Log in to write reviews