
ರಾಯಚೂರು: ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡುಗೆ ದನದ ಕೊಬ್ಬು, ಹಂದಿ ಕೊಬ್ಬು ಬಳಸಿರೋ ವಿವಾದ ಭುಗಿಲೆದ್ದಿದೆ. ಸದ್ಯ ಈ ಬಗ್ಗೆ ರಾಯಚೂರಿನಲ್ಲಿ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಅವರು ಆಕ್ರೋಶ ಹೊರ ಹಾಕಿದ್ದಾರೆ. ಮುಜರಾಯಿ ಇಲಾಖೆಗಳಿಂದ ದೇಗುಲ, ಮಠಗಳನ್ನ ಮುಕ್ತಗೊಳಿಸಿ. ದೇವಸ್ಥಾನ, ಮಠಮಾನ್ಯಗಳನ್ನು ಕೇಂದ್ರ ಸರ್ಕಾರ ನಿರ್ವಹಣೆ ಮಾಡಲಿ. ಈ ಸಂಬಂಧ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಲಿ ಎಂದು ಆಗ್ರಹಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ತಿರುಪತಿ ಶ್ರೀನಿವಾಸನ ಸನ್ನಿಧಾನ. ಹಿಂದೂಗಳ ವಿಶಿಷ್ಟವಾದ ಕೇಂದ್ರ. ಪ್ರಸಾದದಲ್ಲಿ ಕಳಪೆ ತುಪ್ಪದ ಮಾಹಿತಿ ಮಾಧ್ಯಮಗಳಲ್ಲಿ, ಜನರ ಬಾಯಲ್ಲಿದೆ. ಇದರ ಬಗ್ಗೆ ಸರ್ಕಾರ ಸಮಗ್ರ ತನಿಖೆ ಕೈಗೊಂಡು, ಯಾರ ಅಚಾತುರ್ಯದಿಂದ ನಡೆದಿದೆ? ಯಾವಾಗಿನಿಂದ ನಡೆದಿದೆ? ಅನ್ನೋದನ್ನ ತನಿಖೆ ನಡೆಸಬೇಕು. ಜನಪ್ರಿಯ ಪ್ರಧಾನ ಮಂತ್ರಿಗಳು ಈ ವಿಚಾರದಲ್ಲಿ ಪ್ರವೇಶ ಮಾಡಿದ್ದಾರೆ. ಪ್ರಸ್ತುತ ಆಂಧ್ರ ಮುಖ್ಯಮಂತ್ರಿಗಳು ಈ ಬಗ್ಗೆ ಸಿರಿಯಸ್ ಆಗಿ ವಿಚಾರಣೆ ನಡೆಸಿದ್ದಾರೆ. ಯಾರೇ ಮಾಡಿದ್ದರು, ಏನೇ ಮಾಡಿದ್ರು ಖಂಡನೀಯ. ಭಕ್ತರ ಶ್ರದ್ಧಾಕೇಂದ್ರದಲ್ಲಿ ಆಗಿದ್ದು ಹೇಯಕೃತ್ಯ, ಅಪಚಾರ. ಪ್ರಸಾದದಲ್ಲಿ ಈ ರೀತಿ ನಡೆದಿದ್ದನ್ನ ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
Poll (Public Option)

Post a comment
Log in to write reviews