
ಮಂಗಳೂರು: ನಗರದ ಪಾಂಡೇಶ್ವರದ ಮಾಲ್ವೊಂದರಲ್ಲಿನ ಪಬ್‌ನಲ್ಲಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ ಚುಡಾಯಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನೆಹರೂ ನಗರ ನಿವಾಸಿಗಳಾದ ವಿನಯ್(33), ಮಹೇಶ್(27) ಮತ್ತು ಪುತ್ತೂರು ಪಡ್ನೂರು ನಿವಾಸಿಗಳಾದ ಪ್ರಿತೇಶ್(34), ನಿತೇಶ್(33) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಆಗಸ್ಟ್ 3ರಂದು ರಾತ್ರಿ 10.30ಸುಮಾರಿಗೆ 22 ವರ್ಷದ ಯುವತಿ ತನ್ನ ಸ್ನೇಹಿತೆಯೊಂದಿಗೆ ಪಬ್‌ಗೆ ಬಂದಿದ್ದರು. ಈ ವೇಳೆ, ನಾಲ್ವರು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ವಿಚಾರಿಸಿದ ಮತ್ತೋರ್ವ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೀಯರ್ ಬಾಟಲಿಯಲ್ಲಿ ಹಲ್ಲೆ ನಡೆಸಲು ಯತ್ನಿಸಿದ್ದರು ಎಂದು ಈ ಬಗ್ಗೆ ಸಂತ್ರಸ್ತೆ ನೀಡಿರುವ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ನಾಲ್ವರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
Poll (Public Option)

Post a comment
Log in to write reviews