
ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಅವರನ್ನು ಕೊಲೆ ಮಾಡಲೆಂದು ಶೂಟರ್ ಒಬ್ಬ ಗುಂಡು ಹಾರಿಸಿದ್ದ. ಆ ಗುಂಡು ಕೊಂಚ ಗುರಿ ತಪ್ಪಿ ಟ್ರಂಪ್ ಕಿವಿಯನ್ನು ಸೀಳಿದ್ದರಿಂದ ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ವೇಳೆ ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರಿಗೆ ಗುಂಡು ತಾಗಿ ಅವರು ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಗುಂಡಿನಿಂದ ರಕ್ಷಿಸುವಾಗ ಪ್ರಾಣ ಕಳೆದುಕೊಂಡಿದ್ದಾರೆ.
ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಪ್ರೇಕ್ಷಕನನ್ನು 50 ವರ್ಷ ವಯಸ್ಸಿನ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಎರಡು ಹೆಣ್ಣುಮಕ್ಕಳ ತಂದೆ ಕೋರೆ ಕಾಂಪರೇಟೋರ್ ಎಂದು ಗುರುತಿಸಲಾಗಿದೆ. ಅವರು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಟ್ರಂಪ್ ಅವರ ಬೆಂಬಲಿಗರಾಗಿದ್ದರು. ತಮ್ಮ ಕುಟುಂಬದೊಂದಿಗೆ ಟ್ರಂಪ್ ಭಾಷಣ ಕೇಳಲು ಬಂದಿದ್ದ ಅವರಿಗೆ ಗುಂಡು ತಾಗಿ ಮೃತಪಟ್ಟಿದ್ದಾರೆ.
Poll (Public Option)

Post a comment
Log in to write reviews