
ಬೆಂಗಳೂರು: ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಇನ್ಸ್ಸ್ಟಾಗ್ರಾಂ ಖಾತೆಗಳನ್ನು ಖದೀಮರು ಹ್ಯಾಕ್ ಮಾಡಿದ್ದು, ಈ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ತಾಂತ್ರಿಕ ದೋಷದಿಂದ ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೇಸ್ ಬುಕ್ ಹಾಗೂ ಇನ್ಸ್ಸ್ಟಾಗ್ರಾಂ ನಕಲಿ ಖಾತೆಗಳಲ್ಲಿ ಮೆಸೇಜ್ ಮಾಡಿ, ಫೇಕ್ ಆಪ್ ಲಿಂಕ್ ಅಪ್ಡೇಟ್ ಅಂತಾ ಪೋಸ್ಟ್ ಹಾಕಲಾಗಿದ್ದು, ಇದಕ್ಕೆ ನಾನು ಹೊಣೆಯಲ್ಲ ಎಂದಿದ್ದಾರೆ. ಶ್ರೀರಾಮುಲು ಅವರ ಫೇಸ್ಬುಕ್ ಖಾತೆಯಲ್ಲಿ ಉಲ್ಲೇಖಿಸಲಾದ ಲಿಂಕ್ ನಮೂದಿಸಿರುವುದು ಸೈಬರ್ ಖದೀಮರ ತಂತ್ರವಾಗಿದ್ದು, ಯಾರಾದರೂ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಲ್ಲಿ ಅಂತಹವರು ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಎಚ್ಚರವಾಗಿರುವಂತೆ ಹೇಳಲಾಗಿದೆ.
Poll (Public Option)

Post a comment
Log in to write reviews