
ಬೆಂಗಳೂರು: ಜೆಡಿಎಸ್ ಮಾಜಿ ಶಾಸಕರಾದ ಗೌರಿ ಶಂಕರ್ ಹಾಗೂ ಮಂಜುನಾಥ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕುಮಾರಪಾರ್ಕ್ ಸರಕಾರಿ ಅತಿಥಿ ಗೃಹದಲ್ಲಿ ಸೋಮವಾರ ಭೇಟಿ ಮಾಡಿ ಗುಪ್ತ ಸಮಾಲೋಚನೆ ನಡೆಸಿರುವುದು ತುಂಬಾ ಕುತೂಹಲ ಮೂಡಿಸಿದೆ. ಮಾತುಕತೆ ನಂತರ ಮಾಧ್ಯಮದವರೊಂದಿಗೆ ಜೆಡಿಎಸ್ ಮಾಜಿ ಶಾಸಕ ಗೌರಿ ಶಂಕರ್ ಮಾತನಾಡಿದರು. ಜೆಡಿಎಸ್ ಶಾಸಕರು, ಕಾಂಗ್ರೆಸ್ ಗೆ ಬರುವ ವಿಚಾರ ಕೇಳಿದಾಗ ಅವರು ಈಗ ಅಧಿಕಾರ ಇದೆ, ಈಗ ಯಾಕೆ ಮುಗಿಸ್ತಾರೆ..? ಯಾರು ಯಾರನ್ನು ಮುಗಿಸೋಕೆ ಆಗಲ್ಲ ಚುನಾವಣೆ ಮುನ್ನ ಆದರೆ ಅಧಿಕಾರಕ್ಕೆ ಬರುವ ಮುಂಚೆ ಮುಗಿಸಬಹುದಿತ್ತು ಎಂದು ತಿಳಿಸಿದರು ಅಲ್ಲದೆ ಪ್ರಜ್ವಲ್ ಪೆನ್ ಡ್ರೈವ್ ವಿಚಾರವಾಗಿ ನಾನು ಮಾಜಿ ಶಾಸಕ, ನನಗೆ ಈ ಬಗ್ಗೆ ಗೊತ್ತಾಗಲ್ಲ ಅವೆಲ್ಲವೂ ದೊಡ್ಡಮಟ್ಟದಲ್ಲಿ ನಡೆಯುತ್ತೆ, ಪೆನ್‌ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಿಡುಗಡೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ತಿಳಿದುಕೊಂಡು ಮಾತಾಡುತ್ತೇನೆ ಆದರೆ ಈ ಪ್ರಕರಣವನ್ನು ಬಿಜೆಪಿ ಡೈವರ್ಟ್ ಮಾಡಲು ಹೊರಟಿದೆ ಅನ್ಸುತ್ತೆ , ಬೇರೆ ಯಾವುದಾದರೂ ಸಣ್ಣ ಪ್ರಕರಣವನ್ನು ಬಿಜೆಪಿಯವರು ದೊಡ್ಡದಾಗಿ ಮಾತಾಡ್ತಾರೆ ಆದರೆ ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಯಾಕೋ ಮೌನವಾಗಿದ್ದಾರೆ, ಮುಂದೇನಾಗುತ್ತೆ ನೋಡೋಣ ಎಂದರು.
Poll (Public Option)

Post a comment
Log in to write reviews