
ಲಂಡನ್: ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ (55) ನಿಧನ (Graham Thorpe) ಹೊಂದಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ (ಜುಲೈ 05) ದೃಢಪಡಿಸಿದೆ.
ಥಾರ್ಪ್ 1993ರಿಂದ 2005ರವರೆಗೆ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆ ಸಮಯದಲ್ಲಿ 82 ಏಕದಿನ ಪಂದ್ಯಗಳ ಭಾಗವಾಗಿದ್ದರು. ಥಾರ್ಪ್ ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ 6,744 ರನ್ ಗಳಿಸಿದ್ದಾರೆ. ತಂಡದೊಂದಿಗೆ 44.66 ಸರಾಸರಿಯಲ್ಲಿ 16 ಶತಕಗಳನ್ನು ಬಾರಿಸಿದ್ದಾರೆ. ಸೋಮವಾರ ಇಸಿಬಿ ತನ್ನ ವೆಬ್ಸೈಟ್ನಲ್ಲಿ ಥೋರ್ಪ್ ಅವರ ನಿಧನವನ್ನು ದೃಢಪಡಿಸುವ ಹೇಳಿಕೆ ಬಿಡುಗಡೆ ಮಾಡಿದೆ.
ಎಂಬಿಇ ಗ್ರಹಾಂ ಥೋರ್ಪ್ ನಿಧನರಾದ ಸುದ್ದಿಯನ್ನು ಇಸಿಬಿ ಬಹಳ ದುಃಖದಿಂದ ಹಂಚಿಕೊಂಡಿದ್ದಾರೆ. ಗ್ರಹಾಂ ಅವರ ಸಾವಿನಿಂದ ನಾವು ಅನುಭವಿಸುವ ಆಳವಾದ ನೋವನ್ನು ವಿವರಿಸಲು ಸೂಕ್ತ ಪದಗಳಿಲ್ಲ ಎಂದು ತೋರುತ್ತದೆ.” ಎಂದು ಬರೆದುಕೊಂಡಿದ್ದಾರೆ.
ಪ್ರಪಂಚದಾದ್ಯಂತದ ಅಭಿಮಾನಿಗಳಿಂದ ಗೌರವ ಪಡೆದಿದ್ದರು. ಅವರ ಕೌಶಲ್ಯವು ಪ್ರಶ್ನಾತೀತವಾಗಿತ್ತು. 13 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರ ಸಾಮರ್ಥ್ಯಗಳು ಮತ್ತು ಸಾಧನೆಗಳು ಸಹ ಆಟಗಾರರಿಗೆ ಮತ್ತು ಇಂಗ್ಲೆಂಡ್ ಮತ್ತು ಸರ್ರೆ ಸಿಸಿಸಿ ಬೆಂಬಲಿಗರಿಗೆ ಪ್ರೋತ್ಸಾಹದಾಯಕವಾಗಿತ್ತು. ಅತ್ಯುತ್ತಮವಾಗಿ ತರಬೇತುದಾರರಾಗಿ ಇಂಗ್ಲೆಂಡ್ ಪುರುಷರ ತಂಡಕ್ಕೆ ನೆರವಾಗಿದ್ದರು.
ಕ್ರಿಕೆಟ್ ಜಗತ್ತು ಇಂದು ಶೋಕದಲ್ಲಿದೆ. ಈ ಊಹಿಸಲಾಗದ ಕಷ್ಟದ ಸಮಯದಲ್ಲಿ ಅವರ ಪತ್ನಿ ಅಮಂಡಾ ಅವರ ಮಕ್ಕಳು, ತಂದೆ ಜೆಫ್ ಮತ್ತು ಅವರ ಎಲ್ಲಾ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃದಯಗಳು ಮಿಡಿಯುತ್ತವೆ. ಕ್ರೀಡೆಗೆ ಗ್ರಹಾಂ ಅವರ ಅಸಾಧಾರಣ ಕೊಡುಗೆಗಳಿಗಾಗಿ ನಾವು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತೇವೆ, “ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
Poll (Public Option)

Post a comment
Log in to write reviews