
ಶ್ರೀಲಂಕಾ: ತಿಂಗಳ ಅಂತ್ಯದಲ್ಲಿ ಟಿಂ ಇಂಡಿಯಾ ಏಕದಿನ ಸರಣಿ ಪ್ರಯುಕ್ತ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆದರೆ ಪ್ರವಾಸಕ್ಕೂ ಮುನ್ನವೇ ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಷನ್ ಅವರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆಂಬ ಅಹಿತಕರ ಸುದ್ದಿಯೊಂದು ಹೊರಬಿದ್ದಿದೆ.
ಇದೇ ಕಾರಣದಿಂದ ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. 41 ವರ್ಷದ ನಿರೋಶನ್, ಮಾಜಿ ಕ್ರಿಕೆಟಿಗ ತನ್ನ ಕುಟುಂಬದೊಂದಿಗೆ ಗಾಲೆಯ ಅಂಲಂಗೋಡ ನಗರದಲ್ಲಿ ವಾಸಿಸುತ್ತಿದ್ದರು. ಇವರ ಹತ್ಯೆಯ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಗಳವಾರ ರಾತ್ರಿ, ಗಾಲೆ ಜಿಲ್ಲೆಯ ಅತ್ಯಂತ ಚಿಕ್ಕ ಪಟ್ಟಣವಾದ ಅಂಲಂಗೋಡಾದಲ್ಲಿ ವಾಸಿಸುತ್ತಿದ್ದ ನಿರೋಶನ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಮುಂದೆಯೇ ಕಿಡಿಗೇಡಿಗಳು ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ನಿರಂತರ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಯಾವುದೇ ಮಾಹಿತಿ ಪೋಲಿಸ್ ವಲಯದಿಂದ ಹೊರಬಂದಿಲ್ಲ.
Poll (Public Option)

Post a comment
Log in to write reviews