
ಪುಣೆ: ಎನ್ಸಿಪಿಯ ಮಾಜಿ ಕೌನ್ಸಿಲರ್ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಒಂದೆಡೆ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಮತ್ತೊಂದೆಡೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮಾಜಿ ಕೌನ್ಸಿಲರ್ ವನರಾಜ್ ಅಂದೇಕರ್ ಅವರನ್ನು ಭಾನುವಾರ(ಆಗಸ್ಟ್ 1) ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಪುಣೆ ಪೊಲೀಸರ ಪ್ರಕಾರ, ನಗರದ ನಾನಾ ಪೇಠ ಪ್ರದೇಶದಲ್ಲಿ ಮಾಜಿ ಕೌನ್ಸಿಲರ್‌ನ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಲಾಗಿದೆ. ರಾತ್ರಿ 9.30ರ ಸುಮಾರಿಗೆ ತಮ್ಮ ಸಂಬಂಧಿಯೊಂದಿಗೆ ಇಮಾಂದಾರ್ ಚೌಕದಲ್ಲಿ ನಿಂತಿದ್ದರು. ಆಗ ಅವರ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಕ್ರೈಂ ಬ್ರಾಂಚ್ ಮತ್ತು ಇತರ ವಲಯದ ತಂಡಗಳು ವನರಾಜ್ ಅಂದೇಕರ್ ಅವರನ್ನು ಪತ್ತೆ ಹಚ್ಚಿ ಬಂಧಿಸುವ ಮುನ್ನವೇ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ವನರಾಜ್ ಅಂದೇಕರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಸದ್ಯ ಪೊಲೀಸರು ಈ ಬಗ್ಗೆ ತನಿಖೆಯಲ್ಲಿ ನಿರತರಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಕೌಟುಂಬಿಕ ಕಲಹ ಹಾಗೂ ಹಣದ ಕಾರಣದಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ಮೂವರ ವಿಚಾರಣೆ ನಡೆಯುತ್ತಿದೆ.
Poll (Public Option)

Post a comment
Log in to write reviews