ಟಾಪ್ 10 ನ್ಯೂಸ್
ಬರಗಾಲ ಹೋಗಿ, ಮಳೆ-ಬೆಳೆ ಆಗುವಂತೆ ಧರ್ಮಸ್ಥಳ ಮಂಜುನಾಥನನ್ನು ಪ್ರಾರ್ಥಿಸಿದ ಮಾಜಿ ಸಿಎಂ ಬಿ.ಎಸ್.ವೈ

ಬೆಳ್ತಂಗಡಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ದೇವರ ದರ್ಶನ ಮಾಡಿ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಹಳ ವರ್ಷಗಳ ನಂತರ ಸ್ನೇಹಿತರ ಜೊತೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಅಲ್ಲದೆ ವೀರೇಂದ್ರ ಹೆಗ್ಗಡೆಯವರ ಜೊತೆಗೆ ದೇವರ ದರ್ಶನ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.
ನಮ್ಮೂರಲ್ಲಿ ತುಂಬಾ ಬರಗಾಲವಿದೆ, ಊರಲ್ಲಿ ಚೆನ್ನಾಗಿ ಮಳೆಯಾಗಿ ಸಮೃದ್ಧಿಯಿಂದ ಬೆಳೆಯಾಗಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಸೇರಿದಂತೆ ಇನ್ನು ಅನೇಕರು ಜೊತೆಯಲ್ಲಿದ್ದರು.
Poll (Public Option)

Post a comment
Log in to write reviews