
ರಾಮನಗರ: ಕನಕಪುರ ಪಟ್ಟಣದ ರೂರಲ್ ಪದವಿ ಪೂರ್ವ ಕಾಲೇಜಿನ ಮೂವರು ಉಪನ್ಯಾಸಕರ ವಿದ್ಯಾರ್ಥಿನಿಯರಿಗೆ ಬಿಯರ್ ಕುಡಿಸಿ, ಡ್ಯಾನ್ಸ್ ಮಾಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ವಿರುದ್ಧ ಕ್ರಮಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶಿಸಿದೆ. ಉಪನ್ಯಾಸಕರಾದ ವಿಶ್ವನಾಥ್, ಲಕ್ಷ್ಮೀಶ್, ನಾಗೇಶ್ ವಿರುದ್ಧ ದಾಖಲಾಗಿದೆ. ಅಕ್ಟೋಬರ್ 09 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಅಕ್ಟೋಬರ್ 5 ರಿಂದ 10ರವರೆಗೆ ಕನಕಪುರ ಪಟ್ಟಣದ ರೂರಲ್ ಪದವಿ ಪೂರ್ವ ಕಾಲೇಜಿನಿಂದ ಮಡಿಕೇರಿ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸದಲ್ಲಿ ಪ್ರಾಂಶುಪಾಲರು ಬಿಯರ್ ಕುಡಿದ ಬಳಿಕ ಮೂವರು ವಿದ್ಯಾರ್ಥಿನಿಯರನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲವಂತವಾಗಿ ಬಿಯರ್ ಕುಡಿಸಿದ್ದಾರೆ. ಅಲ್ಲದೇ, ತಮ್ಮ ಜೊತೆ ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Poll (Public Option)

Post a comment
Log in to write reviews