
ಮಡಿಕೇರಿ: ಅರಣ್ಯ ಇಲಾಖೆಯ ಸಿಬ್ಬಂದಿ ಛಲ ಬಿಡದೇ ವೃದ್ದೆಯನ್ನು ಕೊಂದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಕಾಡಿಗೆ ಅಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೋಟೆ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ಕಾಡಾನೆಯೊಂದು ವೃದ್ದೆಯ ಮೇಲೆ ಆಗಸ್ಟ್ 30 ರಂದು ಬೆಳಗ್ಗೆ ದಾಳಿ ನಡೆಸಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಹತ್ಯೆ ಮಾಡಿದ ಕಾಡಾನೆಯನ್ನು ಪತ್ತೆ ಹಚ್ಚುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಸಿಬ್ಬಂದಿ ಕೈಗೆ ಸಿಗದೇ ಕಾಡಾನೆ ಸುತ್ತಾಡಿಸಿತ್ತು ಆದರೆ ಕಾರ್ಯಾಚರಣೆ ತಂಡದವರು ಛಲ ಬಿಡದೇ ಆನೆಯನ್ನು ಹುಡುಕಲು ಪ್ರಯತ್ನ ಪಟ್ಟಿದ್ದರು.
ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ಆರ್‌ಆರ್‌ಟಿ ತಂಡದ ಸಿಬ್ಬಂದಿ ಬಾಡಗ ಬಾಣಂಗಾಲ ಹುಂಡಿ ಭಾಗದ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿದರು. ಮಹಿಳೆಯನ್ನು ಹತ್ಯೆಗೈದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಕೊನೆಗೂ ಸಿಬ್ಬಂದಿ ಸೇರಿ ಚನ್ನಂಗಿ ಅರಣ್ಯಕ್ಕೆ ಅಟ್ಟಿದ್ದಾರೆ. ಈ ಕಾಡಾನೆಯು ಕಳೆದ ಮೂರು ತಿಂಗಳಿನಿಂದ ಇದೇ ವಸತಿ ಭಾಗದ ಸುತ್ತಲೂ ಸುತ್ತಾಡುತ್ತಿದ್ದು, ಹಿಂಸೆ ನೀಡುತ್ತಿತ್ತು. ಕಾಡಾನೆಯು ಹಿಂದಿರುಗಿ ಬರಬಹುದು ಎಂಬ ಭಯದಲ್ಲಿ ಕೂಡಲೇ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Poll (Public Option)

Post a comment
Log in to write reviews