
ನಟ ದರ್ಶನ್‌ಗೆ ಸೆಪ್ಟೆಂಬರ್ 30ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಇವತ್ತು ವಿಚಾರಣೆ ನಡೆಸಲಿದೆ. ಸತತ 8 ಬಾರಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದ್ದು ನಾಳೆ ಬೇಲ್ ಸಿಗುತ್ತೋ, ಇಲ್ವೋ ಅಂತ ದರ್ಶನ್ ಚಡಪಡಿಸ್ತಿದ್ದಾರೆ.. ನವರಾತ್ರಿ ಕೂಡ ಆರಂಭವಾಗಿದ್ದು ಜೈಲಿನಲ್ಲೇ ಹಬ್ಬ ಆಚರಿಸುವಂತಾಗಿದೆ. ಬೆನ್ನುನೋವು, ಕೈ ಮೂಳೆಯ ನೋವಿನಿಂದ ಬಳಲುತ್ತಿದ್ದು ಜೈಲಿನ ಫೆಸಿಲಿಟಿಗಳು ಸಿಗದೇ ಕಾಟೇರ ಹೈರಾಣಾಗಿದ್ದಾರೆ.
ಇವತ್ತು ಕಾಟೇರನಿಗೆ ಬೇಲ್ ಸಿಕ್ಕಿದ್ರೆ ಮನೆಯಲ್ಲಿ ಆಯುಧಪೂಜೆ ಜೊತೆ ದಸರಾ ಸಂಭ್ರಮದಲ್ಲಿ ಮಿಂದೇಳ್ತಾರೆ.. ಇಲ್ಲಾ ಬಳ್ಳಾರಿ ಜೈಲಲ್ಲೇ ಮತ್ತೆ ಅದೇ ಮುದ್ದೆ ಮುರಿಬೇಕಾಗುತ್ತೆ.. ಸೋ ಕಾದುನೋಡೋಣ ಕಾಟೇರನಿಗೆ ಶುಕ್ರದೆಸೆನಾ ಇಲ್ಲಾ ವಕ್ರ ದೆಸೆನಾ ಅಂತ..
Poll (Public Option)

Post a comment
Log in to write reviews