
ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನವಾದ ಇಂದು (20 ಆಗಸ್ಟ್) ಡಿ.ಕೆ.ಶಿವಕುಮಾರ್ ಬೆಂಗಳೂರಿನ ಶೇಷಾದ್ರಿಪುರ ವೃತ್ತದಲ್ಲಿ ಇರುವ ರಾಜೀವ್ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ನಂತರ ಮಾಧ್ಯಮಗಗಳೊಂದಿಗೆ ಮಾತಾನಾಡಿದ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕ್ರಾಂತಿಕಾರಿ ನಾಯಕ. ದೇಶದಲ್ಲಿ ಯುವ ನಾಯಕರನ್ನ ತಯಾರಿಸಿದವರು, ಅಂತವರ ಜನ್ಮದಿನವನ್ನು ಬಹಳ ಸಂತೋಷದಿಂದ ಆಯೋಜಿಸಿದ್ದೇವೆ .
ಮೊದಲಿನಿಂದಲೂ ರಾಜೀವ್ ಗಾಂಧಿ ಪ್ರತಿಮೆ ಮಲ್ಲೇಶ್ವರಂನಲ್ಲಿ ಇತ್ತು. ನಾನು ಅಧಿಕಾರಕ್ಕೆ ಬಂದಮೇಲೆ ಪ್ರತಿಮೆಯನ್ನ ಪುನರ್ ನಿರ್ಮಾಣ ಮಾಡಿದ್ದೆವು. ನಾನು ಬೆಂಗಳೂರು ಮಂತ್ರಿಯಾದ ಮೇಲೆ ಮೊದಲ ಸಹಿ ಹಾಕಿದ್ದು ಪುತ್ತಳಿ ಪನರ್ ನಿರ್ಮಾಣಕ್ಕೆ. ಖರ್ಗೆ ಹಾಗೂ ಸಿಎಂ ಕೈಯಿಂದ ಪ್ರತಿಮೆ ಉದ್ಘಾಟನೆ ಮಾಡಿಸಿದ್ದೆ .
Poll (Public Option)

Post a comment
Log in to write reviews