
ಗಾಜಿಯಾಬಾದ್: ಶಾರ್ಟ್ ಸರ್ಕ್ಯೂಟ್‌ನಿಂದ ಐವರು ಸಜೀವ ದಹನವಾದ ಘಟನೆ ಗಾಜಿಯಾಬಾದ್ ನ ಲೋನಿಯ ಬೆಹ್ತಾ ಹಾಜಿಪುರ ಪ್ರದೇಶದಲ್ಲಿ ನಡೆದಿದೆ.
ಮೂರು ಅಂತಸ್ತಿನ ಮನೆಯಲ್ಲಿ ತಡರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಇಬ್ಬರು ಮಹಿಳೆಯರು, ಬಾಲಕಿ ಮತ್ತು ಏಳು ತಿಂಗಳ ಮಗು ಸೇರಿದಂತೆ ಐದು ಜನರು ಸಜೀವ ದಹನವಾಗಿದ್ದಾರೆ. ನಜ್ರಾ, ಆಕೆಯ ಮಗಳು ಇಕ್ರಾ, ಶೈಫುಲ್ ರೆಹಮಾನ್, ಮೊಹಮ್ಮದ್ ಫೈಜ್ ಮತ್ತು ಪರ್ವೀನ್ ಮೃತ ವ್ಯಕ್ತಿಗಳು.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸೇವೆ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯನಲ್ಲಿ ಸಿಲುಕಿದ ಐವರು ಮೃತಪಟ್ಟಿದ್ದಾರೆಂದು ಗಾಜಿಯಾಬಾದ್ ನ ಹೆಚ್ಚುವರಿ ಪೊಲೀಸ್ ಆಯುಕ್ತ ದಿನೇಶ್ ಕುಮಾರ್.ಪಿ ತಿಳಿಸಿದ್ದಾರೆ.
Poll (Public Option)

Post a comment
Log in to write reviews