
ನವದೆಹಲಿ: ನೂತನ ಸರ್ಕಾರದ ಮೊದಲ ಅಧಿವೇಶನ ಜೂನ್ 24 ರಿಂದ ಜುಲೈ 3ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜೀಜು ತಿಳಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಿಂದ ಶುರುವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಮೊದಲ ಅಧಿವೇಶನದಲ್ಲಿ ಹೊಸದಾಗಿ ಚುನಾಯಿತರಾದ ಸಂಸದರ ಪ್ರಮಾಣ ವಚನ, ಸ್ಫೀಕರ್ ಆಯ್ಕೆ ಹಾಗೂ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ..
ಹಾಗೆಯೇ ರಾಜ್ಯ ಸಭೆಯ 264 ನೇ ಅಧಿವೇಶನವು ಜೂನ್ 27 ರಂದು ಪ್ರಾರಂಭವಾಗಿ ಜುಲೈ 3 ರಂದು ಮುಕ್ತಾಯಗೊಳ್ಳದಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
Poll (Public Option)

Post a comment
Log in to write reviews