
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಪವಿತ್ರ ಗೌಡ ಅವರ ಮೊದಲ ಪತಿ ಸಂಜಯ್ ಸಿಂಗ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ನನ್ನ ಮೊದಲ ಹೆಂಡತಿ ಪವಿತ್ರಾ ಗೌಡರದ್ದು ಏನೂ ತಪ್ಪಿಲ್ಲ. ನನ್ನ ನೋವನ್ನು ನಾನು ಹೆಂಡತಿ ಬಳಿ ಹೇಳುತ್ತೇನೆ. ಪವಿತ್ರಾ ಕೂಡ ದರ್ಶನ್ ಜೊತೆ ಹೇಳಿಕೊಂಡಿದ್ದಾಳೆ. ಆದರೆ ದರ್ಶನ್ ಆತುರದ ನಿರ್ಧಾರ ಮಾಡಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಪವಿತ್ರಾ ಎ1 ಅಪರಾಧಿ ಎಂದು ನೋಡಿದಾಗ ತುಂಬಾ ನೋವಾಯಿತು. ತಪ್ಪು ಎಲ್ಲಿಂದ ಶುರುವಾಗಿದ್ದು ಅನ್ನೋದನ್ನು ನೀವೇ ನೋಡಿ. ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಅವರ ಪತ್ನಿಗೆ ಇದೇ ರೀತಿ ಆಗಿದ್ದರೆ ಸುಮ್ಮನೆ ಇರುತ್ತಿದ್ರಾ ಎಂದು ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ.
Poll (Public Option)

Post a comment
Log in to write reviews