
ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿದ ಆರೋಪ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಮಾತ್ರವಲ್ಲ ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿದ ಬೆನ್ನಲ್ಲೇ ವಿಜಯೇಂದ್ರ, ಜಾರಿ ನಿರ್ದೇಶನಾಲಯ, ನಳೀನ್ ಕುಮಾರ್ ಕಟೀಲ್ ವಿರುದ್ಧ FIR ದಾಖಲಿಸಲು ತಿಲಕ್ ನಗರ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.
ಚುನಾವಣಾ ಬಾಂಡ್ಗಳ ಮೂಲಕ ಬೆದರಿಸಿ ಹಣ ಸುಲಿಗೆ ಮಾಡಲಾಗಿದೆ. ಆದ್ದರಿಂದ FIR ದಾಖಲಿಸಬೇಕು ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ನ ಆದರ್ಶ್ ಅಯ್ಯರ್ ಎಂಬುವವರು ನೀಡಿದ್ದ ಖಾಸಗಿ ದೂರಿನ ಅನ್ವಯ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ IPC 384, 120B ಹಾಗೂ 34ರಡಿ FIR ದಾಖಲಾಗಿದೆ.
ಇನ್ನು ಪ್ರಕರಣದಲ್ಲಿ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು A1 ಆರೋಪಿ ಹಾಗೂ ED ಅಧಿಕಾರಿಗಳನ್ನು A2 ಆರೋಪಿಗಳನ್ನಾಗಿಸಲಾಗಿದೆ. ಈ ಪ್ರಕರಣದ ವಿಚಾರಣೆ ಅ.10ಕ್ಕೆ ನಡೆಯಲಿದೆ.
fir-filed-against- vijayendra-kateel- many-others
Poll (Public Option)

Post a comment
Log in to write reviews