2024-12-24 07:29:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗ್ರೀಸ್‌ನಲ್ಲಿ ಭೀಕರ ಕಾಡ್ಗಿಚ್ಚು: 30 ಸಾವಿರ ಜನರ ಸ್ಥಳಾಂತರ

ಅಥೆನ್ಸ್: ಈಶಾನ್ಯ ಅಟ್ಟಿಕಾ ಪ್ರದೇಶದ ಮ್ಯಾರಥಾನ್ ಪಟ್ಟಣದ ಬಳಿ ಭೀಕರ ಕಾಡ್ಗಿಚ್ಚು ಉಂಟಾಗಿದ್ದು, ಇಲ್ಲಿನ 30,000ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸುವಂತೆ ಗ್ರೀಕ್ ಅಧಿಕಾರಿಗಳು ಆದೇಶಿಸಿದ್ದಾರೆ. ಬಿಸಿಯಾದ ಜೋರು ಗಾಳಿಯಿಂದ ಕಾಡ್ಗಿಚ್ಚು ಮ್ಯಾರಥಾನ್ ಪಟ್ಟಣದತ್ತ ವ್ಯಾಪಕವಾಗಿ ಹರಡುತ್ತಿದೆ ಎನ್ನಲಾಗಿದೆ.

ಮ್ಯಾರಥಾನ್ ಓಟದ ಜನ್ಮಸ್ಥಳ: ಹವಾಮಾನ ಬಿಕ್ಕಟ್ಟು ಮತ್ತು ನಾಗರಿಕ ಸಂರಕ್ಷಣಾ ಸಚಿವಾಲಯದ ಪ್ರಕಾರ, ಮ್ಯಾರಥಾನ್ ಓಟದ ಜನ್ಮಸ್ಥಳವಾದ ಮ್ಯಾರಥಾನ್ ನಿವಾಸಿಗಳಿಗೆ ನೆರೆಯ ಕಡಲತೀರದ ಪಟ್ಟಣವಾದ ನಿಯಾ ಮಕ್ರಿ ಕಡೆಗೆ ತೆರಳುವಂತೆ ಸೂಚಿಸಲಾಗಿದೆ. ಈ ಪ್ರದೇಶದಲ್ಲಿನ ಆರು ಬಡಾವಣೆಗಳ ಜನರಿಗೆ ಇಲ್ಲಿಂದ ಬೇರೆಡೆ ಹೋಗುವಂತೆ ಸೂಚಿಸಲಾಗಿದೆ.

ಮ್ಯಾರಥಾನ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಅಥೆನ್ಸ್ 2004ರ ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥಳವಾದ ಅಥೆನ್ಸ್ ಒಲಿಂಪಿಕ್ ಅಥ್ಲೆಟಿಕ್ ಕೇಂದ್ರದಲ್ಲಿನ ಸಾಮಾನು ಸರಂಜಾಮುಗಳನ್ನು ರಾತ್ರೋರಾತ್ರಿ ಸ್ಥಳಾಂತರಿಸಲಾಯಿತು ಎಂದು ಗ್ರೀಕ್ ರಾಷ್ಟ್ರೀಯ ಪ್ರಸಾರಕ ಇಆರ್‌ಟಿ ವರದಿ ಮಾಡಿದೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳು ನೀಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಮುಖ್ಯವಾಗಿ ಉಸಿರಾಟದ ತೊಂದರೆ ಇರುವ ಎಂಟು ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಏತನ್ಮಧ್ಯೆ, ಈಶಾನ್ಯ ಅಟ್ಟಿಕಾ ಪ್ರದೇಶದಲ್ಲಿ ಹಲವಾರು ಕಿಲೋಮೀಟರ್ಗಳವರೆಗೆ ವಿಸ್ತರಿಸಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಪ್ರಯತ್ನಿಸುತ್ತಿದ್ದಾರೆ. ಅಥೆನ್ಸ್ನಿಂದ 35 ಕಿ.ಮೀ ದೂರದಲ್ಲಿರುವ ವರ್ನಾವಾಸ್ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಿಸಿ ಮತ್ತು ಗಾಳಿಯ ವಾತಾವರಣದಿಂದ ಬೆಂಕಿ ಬೇಗನೆ ಹರಡುತ್ತಿದ್ದು, ಅಥೆನ್ಸ್ನ ಸುತ್ತಲೂ ದಟ್ಟವಾದ ಹೊಗೆ ಆವರಿಸಿದೆ.

ಗ್ರೀಕ್ ಹವಾಮಾನ ತಜ್ಞರ ಪ್ರಕಾರ, ಬಲವಾದ ಗಾಳಿಯಿಂದಾಗಿ ಮ್ಯಾರಥಾನ್ ಬಳಿಯ ವಸಾಹತು ವರ್ನಾವಾಸ್‌ನಿಂದ ಸುಮಾರು 100 ಕಿ.ಮೀ ದೂರದವರೆಗೆ ಹೊಗೆ ಹರಡಿದೆ. ಇದು ಬ್ಯೂಫೋರ್ಟ್ ಮಾಪಕದಲ್ಲಿ ಎಂಟರವರೆಗೆ ತಲುಪಿದೆ.

ಸುಮಾರು 400 ಅಗ್ನಿಶಾಮಕ ದಳದ ಸಿಬ್ಬಂದಿ, 29 ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು, 110 ಅಗ್ನಿಶಾಮಕ ಎಂಜಿನ್ಗಳು, ಮಿಲಿಟರಿ ಪಡೆಗಳು ಮತ್ತು ಅನೇಕ ಸ್ವಯಂಸೇವಕರು ಬೆಂಕಿಯನ್ನು ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅಗ್ನಿಶಾಮಕ ದಳದ ವಕ್ತಾರ ವಾಸ್ಸಿಲಿಸ್ ವತ್ರಾಕೊಗಿಯಾನಿಸ್ ಅಥೆನ್ಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಶ್ಚಿಮ ಅಟ್ಟಿಕಾದ ಮೆಗಾರಾ ಪಟ್ಟಣದ ಬಳಿ ಭಾನುವಾರ ಮುಂಜಾನೆ ಸಂಭವಿಸಿದ ಮತ್ತೊಂದು ದೊಡ್ಡ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.

Post a comment

No Reviews