
ಪುಣೆ : ರಸ್ತೆ ಸಂಚಾರ, ಟ್ರಾಫಿಕ್ ಸಮಸ್ಯೆ ತಡೆಯಲು ಮೊಟ್ಟ ಮೊದಲ ಬಾರಿಗೆ ಮಹಿಳಾ ಬೌನ್ಸರ್ಗಳನ್ನು ನೇಮಕ ಮಾಡಲಾಗಿದೆ.
ಪುಣೆಯ ಡಿಪಿ ರಸ್ತೆಯಲ್ಲಿರುವ ಹೌಸಿಂಗ್ ಸೊಸೈಟಿ ಎಂಬ ಪ್ರದೇಶದಲ್ಲಿ ಹೆಚ್ಚಿನ ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳು ಇವೆ. ಹೀಗಾಗಿ ಅಲ್ಲಿ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ನಿತ್ಯವೂ ಈ ಪ್ರದೇಶಕ್ಕೆ ಸಾವಿರಾರು ಜನರು ಆಹಾರಕ್ಕಾಗಿ ಆಗಮಿಸುತ್ತಾರೆ.
ಈ ಪ್ರದೇಶದಲ್ಲಿ ವಿವಿಧ ಬಗೆಯ ಆಹಾರ ದೊರೆಯುವುದರಿಂದ ದಿನ ಬೆಳಗಾದರೆ ಈ ರಸ್ತೆ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ದಿನವೂ ಸಮಸ್ಯೆ ಎದುರಿಸಿ, ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ಹೋಟೆಲ್ ಮಾಲೀಕರಿಗೆ ಮತ್ತು ಸಂಬಂಧ ಪಟ್ಟ ಸೊಸೈಟಿ ಅಧ್ಯಕ್ಷರಿಗೆ ದೂರು ನೀಡಲಾಗಿತ್ತು.
ಟ್ರಾಫಿಕ್ ಕಿರಿಕಿರಿ ದೂರುಗಳು ಹೆಚ್ಚಳವಾದ ಕೂಡಲೇ, ಆ ಪ್ರದೇಶದಲ್ಲಿ ಟ್ರಾಫಿಕ್ ನಿಯಂತ್ರಿಸಲು ಮೊಟ್ಟ ಮೊದಲ ಬಾರಿಗೆ ಮಹಿಳಾ ಬೌನ್ಸರ್ಗಳನ್ನು ಅಲ್ಲಿನ ಸೊಸೈಟಿ ಅಧ್ಯಕ್ಷರು ನೇಮಕ ಮಾಡಿದ್ದಾರೆ. ಇದರಿಂದ ಬೌನ್ಸರ್ಗಳು ಟ್ರಾಫಿಕ್ ನಿಯಂತ್ರಣ ಜೊತೆಗೆ ಹೋಟೆಲ್ಗಳಿಗೆ ಬರುವ ಗ್ರಾಹಕರ ವಾಹನ ಪಾರ್ಕಿಂಗ್ ವ್ಯವಸ್ಥೆಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದರಿಂದ ವಾಹನ ದಟ್ಟಣೆ ಕಡಿಮೆಯಾಗಿ ವಾಹನ ಸಂಚಾರ ಸುಗಮವಾಗಿದೆ.
ಮಹಿಳಾ ಬೌನ್ಸರ್ಗಳ ಕಾರ್ಯಕ್ಕೆ ವಾಹನ ಸವಾರರು ಶ್ಲಾಘನೆ ವ್ಯಕ್ತ ಪಡಿಸಿದ್ದು, ಹಲವು ದಿನಗಳಿಂದ ನಿಯಂತ್ರಿಸಲು ಸಾಧ್ಯವಾಗದ ಟ್ರಾಫಿಕ್ ಸಮಸ್ಯೆ ಬಗೆಹರಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ
Poll (Public Option)

Post a comment
Log in to write reviews