2024-12-24 07:49:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತಂದೆ, ತಮ್ಮನನ್ನು ಕತ್ತರಿಸಿ ಪ್ರೀಜರ್ ನಲ್ಲಿಟ್ಟ ಬಾಲಕಿ

ಉತ್ತರಾಖಂಡ್‌: ತಂದೆ ಮತ್ತು ತಮ್ಮನನ್ನು ಹತ್ಯೆ ಮಾಡಿ 15 ವರ್ಷದ ಬಾಲಕಿ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಆಘಾತಕಾರಿ ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಉತ್ತರಾಖಂಡ್‌ನ ಹರಿದ್ವಾರದಲ್ಲಿ‌ ಈ ಪ್ರಕರಣ ನಡೆದಿದೆ. 
ಮಾರ್ಚ್ 15 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಜೋಡಿ ಕೊಲೆ ನಡೆದಿತ್ತು. ಅಂದಿನಿಂದ ಬಾಲಕಿ ಪರಾರಿಯಾಗಿದ್ದಳು. ಆಕೆಯ 19 ವರ್ಷದ ಗೆಳೆಯ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಗೆ 19ರ ಹರೆಯದ ಯುವಕನ ಜೊತೆಗೆ ಸಂಬಂಧವಿತ್ತು. ಇದನ್ನು ವಿರೋಧಿಸಿದ ತನ್ನ ತಂದೆಯನ್ನು  ಹತ್ಯೆ ಮಾಡಿದ್ದಾಳೆ. ಆಕೆಯ ತಮ್ಮ ಈ ಕೃತ್ಯವನ್ನು ಕಣ್ಣಾರೆ ಕಂಡಿದ್ದರಿಂದ ಆತನನ್ನೂ ಕೊಲೆ ಮಾಡಲಾಗಿದೆ. ಇದಾದ ನಂತರ ಇಬ್ಬರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಫ್ರೀಜರ್‌ನಲ್ಲಿ ತುಂಬಿದ್ದಾರೆ ಎನ್ನಲಾಗಿದೆ. ಈ ಕೊಲೆಯನ್ನು ಆಕೆಯ ಗೆಳೆಯ ಸಂಚು ಮಾಡಿ ಇಬ್ಬರು ಸೇರಿ ಕೊಲೆ ಮಾಡಿರುವುದಾಗಿ ಬಾಲಕಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾಳೆ. ಬಾಲಕಿಯನ್ನು ಮಧ್ಯಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ದೋಭಾಲ್ ಪೊಲೀಸರು ತಿಳಿಸಿದ್ದಾರೆ.

Post a comment

No Reviews