ಗೃಹ ಸಚಿವ ಸ್ವಕ್ಷೇತ್ರದಲ್ಲಿ ಯೋಧನ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರ ಬಂಧನ.
ಯೋಧನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಗೃಹ ಸಚಿವ ಜಿ. ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿ ನಡೆದಿದೆ. ಕೊರಟಗೆರೆ ತಾಲ್ಲೂಕಿನ ಬೈರೇನಹಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ದಾರಿಗೆ ಅಡ್ಡಲಾಗಿ ಕೆಲವರು ನಿಂತಿದ್ದರು. ಸೈನಿಕ ಅವರ ಬಳಿ ದಾರಿ ಬಿಡಿ ಎಂದು ಕೇಳಿದಕ್ಕೆ ಕುಡಿದ ಮತ್ತಿನಲ್ಲಿದ್ದ ಪುಂಡರು, ಕ್ಯಾತೆ ತೆಗೆದು ಮದ್ಯದ ಬಾಟಲಿಯಿಂದ ಸೈನಿಕ ಗೋವಿಂದರಾಜು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಯೋಧನ ಮೇಲೆ ದಾಳಿಮಾಡಿದ ಯುವಕರನ್ನ ಕೊರಟಿಗೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಅರಸಾಪುರದ 29 ವರ್ಷದ ಭರತ್, ಮಧುಗಿರಿ ತಾಲ್ಲೂಕಿನ ಕೊಡಗದಾಲದ 32 ವರ್ಷದ ಪುನೀತ, ಹುಣಸವಾಡಿಯ 32 ವರ್ಷದ ಗೌರಿಶಂಕರ, 32 ವರ್ಷದ ಶಿವಾ, ಕೊಡಿಗೇನಹಳ್ಳಿ 35 ವರ್ಷದ ದಿಲೀಪ್ ಎಂದು ಗುರುತಿಸಲಾಗಿದೆ. ಈ ಐವರ ಪೈಕಿ ಭರತ್, ಪುನೀತ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಮೂವರು ಯುವಕರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯೋಧ ಗೋವಿಂದರಾಜು ಜಮ್ಮುಕಾಶ್ಮೀರದ ಭಾರತೀಯ ಭೂಸೇನೆ ಸಿಪಾಯಿಯಾಗಿ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ರಜೆಯ ಮೇಲೆ ಊರಿಗೆ ಬಂದಿದ್ದರು. ಯುವಕರ ಗುಂಪೊಂದು ಮಾಡಿದ ಹಲ್ಲೆ ಇಂದ ತೀವ್ರವಾಗಿ ಗಾಯಗೊಂಡಿರುವ ಗೋವಿಂದರಾಜು ಚಿಕಿತ್ಸೆ ಪಡೆಯುತ್ತಿದ್ದಾರೆ.
Post a comment
Log in to write reviews