
ವಿಜಯಪುರ : ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದ ಹೊರವಲಯದಲ್ಲಿ ಕುಡಿದ ಮತ್ತಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸಿದ್ದಪ್ಪ ಶಿವಪ್ಪ ನಿಡಗುಂದಿ, ಸಮರ್ಥ ಶಿವಪ್ಪ ನಿಡಗುಂದಿ ಸಹಚರರು ಸೇರಿ ಕಂಠ ಪೂರ್ತಿ ಕುಡಿದು ಚಂದ್ರು ಬಬಲೇಶ್ವರ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.
ಚಂದ್ರು ಬಬಲೇಶ್ವರ ಕಳ್ಳತನ ಮಾಡಿದ್ದಾನೆಂಬ ಆರೋಪ ಹೊರಿಸಿ ಬೆನ್ನ ಮೇಲೆ ಬಾಸುಂಡೆ ಬರುವಂತೆ ಹೊಡೆದು ಕಲ್ಲು, ದೊಣ್ಣೆಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಾದ ಚಂದ್ರುವನ್ನು ಹೆಚ್ಚಿನ ಚಿಕಿತ್ಸಗೆಗಾಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ವಿಜಯಪುರಕ್ಕೆ ದಾಖಲಿಸಲಾಗಿದೆ. ಈ ಸಂಬಂಧ ದೂರು ದಾಖಲಿಸಿದರೂ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Poll (Public Option)

Post a comment
Log in to write reviews