ರನ್ ಮಷೀನ್ ಎಂದೇ ಖ್ಯಾತಿ ಪಡೆದಿರುವ ದಾಖಲೆಗಳ ಸರದಾರ ಅಭಿಮಾನಿಗಳ ಕಿಂಗ್ ಕೊಹ್ಲಿ ಕಾನ್ಪುರದಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನ 2ನೇ ಇನ್ನಿಂಗ್ಸ್ 47 ರನ್ ಬಾರಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಅತೀ ವೇಗವಾಗಿ ಕಡಿಮೆ ಇನ್ನಿಂಗ್ಸ್‌ನಲ್ಲಿ 27000 ರನ್ ಪೂರೈಸಿರುವ ಮೊದಲಿಗ ಎಂಬ ಹೆಮ್ಮೆಯ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ 600ಕ್ಕೂ ಕಡಿಮೆ ಇನ್ನಿಂಗ್ಸ್ ಬಳಸಿಕೊಂಡು ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಮೊದಲು ಕ್ರಿಕೆಟ್ ದೇವರೆಂದೇ ಪ್ರಸಿದ್ಧಿ ಪಡೆದಿರುವ ಸಚಿನ್ ತೆಂಡುಲ್ಕರ್ 623 ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕಾರ 648 ಇನ್ನಿಂಗ್ಸ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 650 ಇನ್ನಿಂಗ್ಸ್ ಬಳಸಿಕೊಂಡು 27000 ಸಾವಿರ ರನ್ ಕಲೆಹಾಕಿದ್ದರು. ಆದರೆ ಇದೀಗ ಈ ದಾಖಲೆ ರನ್ ಮಷೀನ್, ದಾಖಲೆಯ ಸರ್ದಾರನೇ ಮಾಡಿರುವುದು ಬಹಳ ವಿಶೇಷವಾಗಿದೆ.
Post a comment
Log in to write reviews