ಟಾಪ್ 10 ನ್ಯೂಸ್
ದಲ್ಲಾಳಿಗಳ ಕಾಟಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರು.

ಬಳ್ಳಾರಿ : ದಲ್ಲಾಳಿಗಳ ಕಾಟದಿಂದ ಬೇಸತ್ತು ನಾಲ್ವರು ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಸಿದ ರೈತರನ್ನು ರುದ್ರೇಶ್, ಎಣ್ಣೆ ಶೇಖರ, ಹನುಮಂತ, ಕೋಣೇರಪ್ಪ ಎಂದು ಗುರುತಿಸಲಾಗಿದೆ. ಸದ್ಯ ನಾಲ್ವರು ರೈತರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದೂವರೆ ವರ್ಷದ ಹಿಂದೆ ಗ್ರಾಮಸ್ಥರು ಇದೇ ಊರಿನವರಾದ ರಾಮರೆಡ್ಡಿ, ಸುದರ್ಶನ ಮತ್ತು ವಿರೂಪಾಕ್ಷ ಎಂಬ ಮಧ್ಯವರ್ತಿಗಳ ಮೂಲಕ ಒಣ ಮೆಣಸಿನಕಾಯಿಯನ್ನು ಅಗ್ರಿಗೇಡ್ ಕಂಪನಿಗೆ ಮಾರಾಟ ಮಾಡಿದ್ದರು. ಕಂಪನಿಯ ಅಶಾರಾಣಿ, ಆಶೋಕ ಕುಮಾರ, ಶಿವಮೂರ್ತಿ ಎಂಬವರು ಬೆಳೆ ಖರೀದಿಸಿದ್ದರು.
ಇವರು ಗ್ರಾಮದ 65 ರೈತರ 1.93 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡು ಸತಾಯಿಸುತ್ತಿದ್ದಾರೆ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಮನನೊಂದ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
Poll (Public Option)

Post a comment
Log in to write reviews