
ಮೈಸೂರು : ಕಾಡು ಹಂದಿಗಳು ಬಿತ್ತನೆ ಬೀಜ ಮತ್ತು ಜೋಳವನ್ನು ತಿಂದು ಹಾಕಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.
ರೈತ ಕಾಳಶೆಟ್ಟಿ, 3 ಎಕರೆ ಪ್ರದೇಶದಲ್ಲಿ ಜೋಳವನ್ನು ಬೆಳೆದಿದ್ದರು. ಕಾಡು ಹಂದಿಗಳು ಜೋಳವನ್ನು ಸಂಪೂಣ೯ವಾಗಿ ತಿಂದು ಹಾಕಿವೆ. ಕಾಡು ಹಂದಿಗಳ ಕಾಟದಿಂದ ರೈತರು ಬೇಸತ್ತಿದ್ದಾರೆ. ನಂಜಾಪುರ ನಾಡಪ್ಪನಹಳ್ಳಿ, ಹಳ್ಳದಕೊಪ್ಪಲು, ರಂಗಯ್ಯನಕೊಪ್ಪಲು ಗ್ರಾಮಗಳಲ್ಲಿಯೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳ ಹಾಳಿಯಿಂದ ಮುಕ್ತಿ ನೀಡುವಂತೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
Poll (Public Option)

Post a comment
Log in to write reviews