
ಬೆಂಗಳೂರು: ತೆಲುಗಿನ ಜನಪ್ರಿಯ ಯೂಟ್ಯೂಬರ್ ಹರ್ಷಾ ಸಾಯಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಲಾಗಿದೆ. ಹರ್ಷ ಸಾಯಿ, ಯೂಟ್ಯೂಬ್ನಲ್ಲಿ ವಿಡಿಯೋಗಳಲ್ಲಿ ಬಡವರಿಗೆ ಹಣಕಾಸು ಸಹಾಯ ಮಾಡುವ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಬಡವರನ್ನು ಗುರುತಿಸಿ ಅವರಿಗೆ ಆಶ್ಚರ್ಯ ಆಗುವ ರೀತಿಯಲ್ಲಿ ಹಣ ಸಹಾಯ ಮಾಡುವುದು, ಬಳಿಕ ಅವುಗಳ ವಿಡಿಯೋಗಳನ್ನು ಚಿತ್ರೀಕರಿಸಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಈ ಯೂಟ್ಯೂಬರ್ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವೇ ಇದೆ.
ಇನ್ನೂ ಹರ್ಷ ಸಾಯಿ ಒಂದು ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದರು, ಅದೇ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ನಟಿಯೇ ಈಗ ಹರ್ಷ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಮೋಸದ ಆರೋಪ ಹೊರಿಸಿದ್ದಾರೆ. ಯುವತಿ ನೀಡಿರುವ ದೂರಿನಂತೆ, ಹರ್ಷ ಸಾಯಿ ಹಾಗೂ ಯುವತಿ ಪಾರ್ಟಿಯೊಂದರಲ್ಲಿ ಮೀಟ್ ಆಗಿದ್ದರಂತೆ. ಆ ನಂತರ ಇಬ್ಬರ ನಡುವೆ ಪರಿಚಯ ಬೆಳೆದಿದೆ. ಬಳಿಕ ಇಬ್ಬರೂ ಯೂಟ್ಯೂಬ್ಗಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಬಳಿಕ ಹರ್ಷಾ ಸಾಯಿ ಯುವತಿ ಸೇರಿ ಸಿನಿಮಾ ನಿರ್ಮಾಣ ಮಾಡಿದರಂತೆ. ಆ ಸಮಯದಲ್ಲಿ ಹರ್ಷ ಸಾಯಿ ತಮ್ಮಿಂದ ಎರಡು ಕೋಟಿ ಹಣ ಪಡೆದಿದ್ದಾರೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ನರ್ಸಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ.
Poll (Public Option)

Post a comment
Log in to write reviews