
ಬೆಂಗಳೂರು: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಕುಖ್ಯಾತ ಲ್ಯಾಪ್ಟಾಪ್ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ. ದಯಾನಂದ್ ಸಾಗರ್ ಕಾಲೇಜು ವಿದ್ಯಾರ್ಥಿಗಳ ಲ್ಯಾಪ್ಟಾಪ್ ಕಳವು ಬಗ್ಗೆ ದೂರು ಬಂದಿತ್ತು. ಇದನ್ನು ಆಧರಿಸಿ ತನಿಖೆ ಮಾಡಿದ ಪೊಲೀಸರು ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕುಮಾರ್ ಪಿಜಿ ಹಾಗೂ ವಿದ್ಯಾರ್ಥಿಗಳು ವಾಸವಿರುವ ರೂಂಗಳನ್ನು ಟಾರ್ಗೆಟ್ ಮಾಡಿ ಲ್ಯಾಪ್ಟಾಪ್ ಅನ್ನು ಕಳುವು ಮಾಡ್ತಾ ಇದ್ದ. ಹಾಗೆ ಕದ್ದ ಲ್ಯಾಪ್ ಟಾಪ್ ಗಳನ್ನ ತಮಿಳುನಾಡಿನ ಶಂಕರಪುರ ಏರಿಯಾದಲ್ಲಿ ಮಾರಾಟ ಮಾಡಿ, ಕಾಲೇಜು ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ನನಗೆ ಕಡಿಮೆ ಬೆಲೆಗೆ ಲ್ಯಾಪ್ಟಾಪ್ ಮಾರಿ ಹೋಗಿದ್ದಾರೆ ಎಂದು ಕೊಳ್ಳುವವರ ಬಳಿ ಹೇಳಿ ನಂಬಿಸುತ್ತಿದ್ದ.
ಇನ್ನು ಕಾಲೇಜು ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳವು ಬಗ್ಗೆ ದೂರು ಸಹ ನೀಡಿದ್ದರು. ಈ ದೂರನ್ನುಆಧರಿಸಿ ತನಿಖೆ ಮಾಡಿದ ಪೊಲೀಸರು ಕುಮಾರ್ ನನ್ನು ಬಂಧಿಸಿದ್ದಾರೆ. ಬಂಧಿತನಿಂದ 25 ಲ್ಯಾಪ್ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕುಮಾರ ಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews