
ಕುಟುಂಬ ರಾಜಕಾರಣ ಎಲ್ಲಾ ಪಕ್ಷದಲ್ಲೂ ಇದೆ ಆದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕುಟುಂಬದ ಬಗ್ಗೆ ಯಾಕೆ ಮಾತನಾಡಿದ್ದೀರಾ ಎಂದು ಸಂಸದ ಡಾ.ಸುಧಾಕರ್ ಹೇಳಿದರು.
ಚನ್ನಪಟ್ಟಣದಲ್ಲಿ ಕುಮಾರಣ್ಣ ಫ್ಯಾಮಿಲಿ ಸ್ಪರ್ಧೆ ಕುರಿತು ಕೋಲಾರದಲ್ಲಿ ಪ್ರತಿಕ್ರಿಯಿಸಿದ ಅವರು, ಕೇವಲ ಡಾ.ಮಂಜುನಾಥ್ ಮತ್ತು ದೇವೇಗೌಡರು ಬಗ್ಗೆ ನೀವು ಹೇಳುತ್ತೀರಿ. ಆದ್ರೆ ಜವಾಹರಲಾಲ್ ನೆಹರು, ಸೋನಿಯಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಬಗ್ಗೆ ಏಕೆ ಕೇಳುವುದಿಲ್ಲ. ಒಂದೇ ಫ್ಯಾಮಿಲಿಯಲ್ಲಿ 10 ಮಂದಿ ಸ್ಪರ್ಧೆ ಮಾಡುತ್ತಾರೆ. ಇಡೀ ದೇಶ ಅವರ ಕೈಯಲ್ಲಿದೆ, ಖರ್ಗೆ ಕೈಯಲ್ಲಿ ಇದ್ದೀಯಾ ಎಂದು ಪ್ರಶ್ನಿಸಿದ್ದಾರೆ. ದೇವೇಗೌಡರು ಬಡ ರೈತ ಕಷ್ಡಪಟ್ಟು ಮೇಲೆ ಬಂದಿದ್ದಾರೆ. ಈ ರೀತಿ ಅನೇಕ ಕುಟುಂಬಗಳು ಬಂದಿವೆ, ಉದಾಹರಣೆಗೆ ಸಿದ್ದರಾಮಯ್ಯ ಮಗ ಇಲ್ಲವಾ? ಹಾಗೇ ಎಲ್ಲಾ ಕುಟುಂಬಗಳು ಬಂದಿದ್ದಾರೆ ಎಂದು ಹೇಳಿದ್ದಾರೆ.
Poll (Public Option)

Post a comment
Log in to write reviews