ಲೋಕಸಭಾ ಚುನಾವಣೆ ಬಳಿಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ನಾಯಕರ ಹೇಳಿಕೆ ಮಧ್ಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೂಡ ಬಿಜೆಪಿ ನಾಯಕರ ಮಾತಿಗೆ ಪುಷ್ಟಿ ಎಂಬಂತೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಸತಾರ ನಗರದಲ್ಲಿ ಸಿಎಂ ಏಕನಾಥ್ ಶಿಂಧೆ ಮಾತನಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಾನು ಕರ್ನಾಟಕದ ಒಂದು ಕಾರ್ಯಕ್ರಮಕ್ಕೆ ತೆರಳಿದಾಗ ಅವರು ಹೇಳಿದ್ರು, ಕರ್ನಾಟಕದಲ್ಲಿಯೂ 'ನಾಥ್' ಆಪರೇಷನ್ ಮಾಡೋದಿದೆ ಅಂದ್ರು. ನಾನು ನಾಥ್ ಆಪರೇಷನ್ ಅಂದ್ರೆ ಏನು ಅಂತ ಕೇಳಿದೆ. ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರ ಪತನ ಮಾಡಿದ್ರಿ.. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದು ಹೇಳಿದರು. ಇದರಿಂದ ಕರ್ನಾಟದಲ್ಲಿ ತುಂಬಾ ದಿನ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದರು.
ಲೋಕಸಭಾ ಚುನಾವಣೆ ಬಳಿಕ ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ನನಗೆ ಚುನಾವಣೆ ಮುಗಿದ ಬಳಿಕ ಅಲ್ಲಿನ ನಾಯಕರು ಕರ್ನಾಟಕಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ಸಭೆಯಲ್ಲಿ ಸಿಎಂ ಏಕನಾಥ್ ಶಿಂಧೆ ಹೇಳಿಕೆ ನೀಡಿದರು.
Tags:
- India News
- Kannada News
- chief minister maharashtra
- maharashtra chief minister
- who is the chief minister of maharashtra
- eknath shinde maharashtra cm oath taking live
- maharashtra government crisis
- karnataka and maharashtra border dispute
- maharashtra karnataka border dispute
- karnataka maharashtra border dispute
- chief minister eknath shinde
- eknath shinde new cm of maharashtra
- maharashtra government
- maharashtra karnataka border
Post a comment
Log in to write reviews