
ಬೆಳಗಾವಿ: ಹೆಸ್ಕಾಂ ಸಹಾಯಕ ಇಂಜಿನಿಯರ್ ವಿರುದ್ಧ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದ ದೂರುದಾರೆ ಸೇರಿದಂತೆ 13 ಜನರಿಗೆ ಬೆಳಗಾವಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ 6 ತಿಂಗಳು ಶಿಕ್ಷೆ ವಿಧಿಸಿದೆ.
ಬಿ.ವಿ.ಸಿಂಧು ಸುಳ್ಳು ಕೇಸ್ ದಾಖಲಿಸಿ ಜೈಲು ಸೇರಿದ ಮಹಿಳೆಯಾಗಿದ್ದಾಳೆ. ಅಪರಾಧಿ ಸಿಂಧು ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರರಾದ ತುಕಾರಾಮ್ ಮಜ್ಜಿಗೆಯವರ ವಿರುದ್ಧ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದಳು. ಸುಳ್ಳು ಕೇಸ್ ಎಂದು ವಿಚಾರಣೆ ವೇಳೆ ಸಾಬೀತಾದ ಹಿನ್ನೆಲೆ ದೂರುದಾರೆ ಬಿ.ವಿ.ಸಿಂಧು ಸೇರಿ 13 ಜನರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಹದಿಮೂರು ಆರೋಪಿಗಳಿಗೂ ತಲಾ 86ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
Poll (Public Option)

Post a comment
Log in to write reviews