
ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಜಿನ್ನಾ ಏರ್ ಪೋರ್ಟ್ ಮುಂಭಾಗದಲ್ಲಿ ಭಾರಿ ಸ್ಫೋಟವೊಂದು ಸಂಭವಿಸಿದೆ. ವಿಮಾನ ನಿಲ್ದಾಣದ ,ಮುಂದೆ ಸ್ಫೋಟಗೊಂಡು ಐವರು ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.ಇನ್ನೂ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯದಳ ಹಾಗೂ ಮಿಲಿಟರಿ ಕಮಾಂಡೋಗಳು ಭೇಟಿ ನೀಡಿದ್ದು, ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ತೈಲ ಟ್ಯಾಂಕರ್ ಒಳಗೆ ಬ್ಲಾಸ್ಟ್ ಆಗಿದ್ದು, ಸ್ಫೋಟಕ್ಕೆ ಯಾವ ವಸ್ತು ಬಳಸಲಾಗಿದೆ ಎಂಬುದು ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಐಇಡಿ ಬಾಂಬ್ ಬ್ಲಾಸ್ಟ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಸ್ಫೋಟದ ತೀವ್ರತೆ ಹೆಚ್ಚಿದ್ದು, ಭಾರಿ ಶಬ್ದ ಕೇಳಿಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
Poll (Public Option)

Post a comment
Log in to write reviews