2024-09-19 04:48:09

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದಕ್ಷಿಣ ಆಫ್ರಿಕಾಗೆ 4 ರನ್‌ಗಳ ರೋಚಕ ಜಯ 

ನ್ಯೂಯಾರ್ಕ್‌: ಟಿ 20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಬಾಂಗ್ಲದೇಶ ವಿರುದ್ಧ ನಡೆದ ರೋಚಕ ಹಣಾ ಹಣಿಯಲ್ಲಿ ಹರಿಣ ಪಡೆ ಬಾಂಗ್ಲಾ ಟೈಗರ್ಸ್‌ ಅನ್ನ ಮಣಿಸಿತು.
ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 113 ರನ್‌ ಗಳಿಸಿತು.
ಈ 114 ರನ್‌ಗಳ ಸುಲಭದ ಗುರಿ ಬೆನ್ನಟ್ಟಿದ ಬಾಂಗ್ಲಾ ಕೊನೆಯ ಓವರ್‌ ವರೆಗೂ ಗೆಲುವು ಪಡೆಯಲು ಹೋರಾಟ ನಡೆಸಿತು. ದಕ್ಷಿಣ ಆಫ್ರಿಕಾದ ಮಾರಕ ದಾಳಿಗೆ ನಲುಗಿದ ಬಾಂಗ್ಲಾ ಟೈಗರ್ಸ್‌ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 109 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಬಾಂಗ್ಲಾ 4 ರನ್‌ ಗಳಿಂದ ದಕ್ಷಿಣ ಆಫ್ರಿಕಾಗೆ ಶರಣಾಯಿತು.

Post a comment

No Reviews