
ಮುಂಬೈ : ಮಹಾರಾಷ್ಟ್ರದಲ್ಲಿ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಬೈಲ್ ನಲ್ಲಿ ಹೆಚ್ಚು ಹೊತ್ತು ಕಳೆಯುವುದು ಬೇಡ ಎಂದು ತಾಯಿ ಬೈದಿದ್ದಕ್ಕೆ ಬಾಲಕಿ ವಿಷ ಸೇವಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯ ಅಂಬರನಾಥ್ ಪ್ರದೇಶದ ನಿವಾಸಿಯಾದ ಬಾಲಕಿ ಸೆಪ್ಟೆಂಬರ್ 26 ರಂದು ವಿಷ ಸೇವನೆ ಮಾಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆಕೆಯನ್ನು ನೆರೆಯ ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವಳು ಅಕ್ಟೋಬರ್ 2 ರಂದು ಸಾವನ್ನಪ್ಪಿದಳು ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Poll (Public Option)

Post a comment
Log in to write reviews