
ಬಿಗ್ ಬಾಸ್ ಸೀಸನ್ 11ರ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳಗಳು ಹೆಚ್ಚುತ್ತಲೇ ಇದೆ. ದಿನ ಕಳೆದಂತೆಲ್ಲ ಬಿಗ್ ಬಾಸ್ ಮನೆಯಲ್ಲಿ ಟೆನ್ಷನ್ ಹೆಚ್ಚುತ್ತಿದೆ. ಶಿಶಿರ್ ಬಳಿಕ ಹನುಮಂತ ಕ್ಯಾಪ್ಟನ್ ಆಗಿದ್ದರು. ಈಗ ಹೊಸ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ ನೀಡಲಾಗಿದೆ. ಈ ವೇಳೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಜಗಳ ನಡೆದಿದ್ದು, ಈಗ ಜಗಳ ಮಿತಿಮೀರಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ ರಲ್ಲಿ ಟಾಸ್ಕ್ ವೇಳೆ ಸೋಪ್ ನೀರು ಎರಚಿದ್ದರಿಂದ ಸ್ಪರ್ಧಿಗಳು ಆಸ್ಪತ್ರೆ ಸೇರುವಂತೆ ಆಗಿದ್ದು, ಇದರಿಂದ ಜಗಳ ಮಿತಿ ಮೀರಿತ್ತು. ಅದೇ ರೀತಿ ಬಿಗ್ ಬಾಸ್ ಸೀಸನ್ 11 ರಲ್ಲಿಯೂ ಇಂತಹ ಘಟನೆಯು ನಡೆದಿದ್ದು ಟಾಸ್ಕ್ ವೇಳೆ ಶಿಶಿರ್ ಹಾಗೂ ಮಂಜು ನಡುವೆ ಜಗಳ ಆಗಿದೆ. ಮನೆಯಲ್ಲಿ ಸ್ಪರ್ಧಿಗಳು ಒಬ್ಬರಿಗೊಬ್ಬರು ಮನಸ್ಥಾಪ ಮಾಡಿಕೊಂಡಿದ್ದಾರೆ. ಈ ಟಾಸ್ಕ್ನಲ್ಲಿ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ನ ಹಾಳು ಮಾಡಬೇಕು ಎಂಬ ಕಾರಣಕ್ಕೆ ಕಿರಿಕ್ ನಡೆದಿದೆ. ಇದು ಮಿತಿಮೀರುವ ಸೂಚನೆ ಸಿಕ್ಕಿದೆ.
Poll (Public Option)

Post a comment
Log in to write reviews