
ಹಾಸನ, ಸೆ.16: ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಬಿಕ್ಕೋಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ನುಗ್ಗಿದ್ದು. ಕಾಡಾನೆಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಗುಂಪನ್ನು ಗ್ರಾಮದಿಂದ ಓಡಿಸಿ ನಮ್ಮ ಫಸಲನ್ನು ರಕ್ಷಿಸಿ ಎಂದು ರೈತರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಒಂದು ಕಡೆ ದೈತ್ಯಾಕಾರದ ಒಂಟಿ ಸಲಗ ಎಂಟ್ರಿಯಾಗಿದೆ. ಇನ್ನೊಂದೆಡೆ ಗ್ರಾಮದೊಳಗೆಲ್ಲಾ ಕಾಡಾನೆಗಳ ಹಿಂಡು ಓಡಾಡುತ್ತಿದೆ. ಕಾಡಾನೆಗಳನ್ನು ಕಂಡು ಗ್ರಾಮಸ್ಥರು ಗಾಬರಿಯಾಗಿದ್ದು. ಬೆಳಿಗ್ಗೆ ಸಂಜೆ ಗ್ರಾಮಕ್ಕೆ ಗಜಪಡೆ ಬರುತ್ತಿವೆ. ಬೇಲೂರು ತಾಲ್ಲೂಕಿನಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಮಿತಿಮೀರಿದೆ. ಇದರಿಂದ ಜನರು ಆಚೆ ಹೋಗಲು ಕೂಡ ಭಯಪಡುವಂತಾಗಿದೆ.
Poll (Public Option)

Post a comment
Log in to write reviews