
ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರ ಕಸ್ಟಡಿ ನಾಳೆ ಅಂತ್ಯವಾಗಲಿದ್ದು ಇದರ ಬೆನ್ನಲ್ಲೇ ನಾಗೇಂದ್ರ ಪತ್ನಿಯನ್ನು ಇಡಿ ವಶಕ್ಕೆ ಪಡೆದಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಪತ್ನಿ ಮಂಜುಳರನ್ನು ವಶಕ್ಕೆ ಪಡೆದಿರುವ ಇಡಿ, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಕಚೇರಿಯಲ್ಲಿ ಮಂಜುಳಾ ಅವರನ್ನು ವಿಚಾರಣೆ ಮಾಡಲಿದೆ.
ನಿನ್ನೆಯಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಆಪ್ತ ಸಹಾಯಕರಾದ ಹರೀಶ್, ದೇವೇಂದ್ರಪ್ಪ ಅವರಿಗೆ ಇಡಿ ವಿಚಾರಣೆ ಮಾಡಲಾಗಿತ್ತು. ಈ ವೇಳೆ ಸಿಕ್ಕ ಮಾಹಿತಿ ಆಧರಿಸಿ ಅಧಿಕಾರಿಗಳು ನಾಗೇಂದ್ರ ಪತ್ನಿಯ ವಿಚಾರಣೆಯನ್ನು ನಡೆಸಲಿದ್ದಾರೆ.
Poll (Public Option)

Post a comment
Log in to write reviews