ಬಾಗಲಕೋಟೆ: ವಿದ್ಯಾರ್ಥಿಗಳು ಶಾಲೆಗೆ ಹೋಗಲು ರಸ್ತೆ ಇಲ್ಲದೆ ಹೊಲ ಮತ್ತು ಗದ್ದೆಗಳಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಹುನಗುಂದ ತಾಲೂಕಿನ ಹಿರೇಬಾದವಾಡದಲ್ಲಿ ಬೆಳಕಿಗೆ ಬಂದಿದೆ.
ಇದು ಯಾವುದೇ ಮಲೆನಾಡ ಪ್ರದೇಶವಲ್ಲ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಬಾದವಾಡದಿಂದ ಸರಿ ಸುಮಾರು 80ರಿಂದ 100 ವಿದ್ಯಾರ್ಥಿಗಳು ತಾಲೂಕಿನ ಚಿಕ್ಕ ಬಾದವಾಡಗಿಯಲ್ಲಿರುವ ಸರ್ಕಾರಿ ಶಾಲೆಗೆ ಹೋಗಲು ರಸ್ತೆ ವ್ಯವಸ್ಥೆ ಇಲ್ಲದೆ ಪ್ರತಿ ದಿನವೂ ಗದ್ದೆ ಮತ್ತು ಹೊಲದಲ್ಲೇ 9 ಕಿಲೋ ಮೀಟರ್ ನರಕಯಾತನೆ ಅನುಭವಿಸುತ್ತಾ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.
ಇನ್ನು ಮಳೆಗಾಲದಲ್ಲಂತು ಈ ವಿದ್ಯಾರ್ಥಿಗಳ ಗೋಳು ಹೇಳತೀರದು. ಇದರಿಂದಾಗಿ ರೈತರಿಗೂ ಬಹಳ ತೊಂದರೆ ಉಂಟಾಗಿದೆ. ಸ್ಥಳಿಯ ಆಡಳಿತ ಮಂಡಳಿ ಇದನ್ನು ಸರಿಪಡಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಮತ್ತು ರೈತರು ಆಗ್ರಹ ಪಡಿಸಿದ್ದಾರೆ.
Post a comment
Log in to write reviews