
ಬೆಂಗಳೂರು: ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ನಡೆಯುತ್ತಿದೆ. ಜೂನ್.3 ರಂದು ಮತದಾನಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ. ಈ ನಡುವೆ ಚುನಾವಣಾ ನೀತಿ ಸಂಹಿತೆ ಬದಿಗಿರಿಸಿರುವ ಶಿಕ್ಷಣ ಇಲಾಖೆಯು KPSC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಮೌಲ್ಯಮಾಪಕರನ್ನು ನಿಯೋಜಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ನಡೆಸಲಾಗಿತ್ತು. ಇದರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡ ಭಾಷಾ ಶಿಕ್ಷಕರನ್ನು ನಿಯೋಜಿಸಲು ಸೂಚಿಸಲಾಗಿರುತ್ತದೆ ಎಂದಿದೆ.
ಶಿಕ್ಷಕರನ್ನು ದಿನಾಂಕ ಜೂನ್ 2 ಹೊರತುಪಡಿಸಿ ಮೇ 29ರಿಂದ ಜೂನ್ 5 ರವರೆಗು ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಕೇಂದ್ರ ಕಛೇರಿ ಉದ್ಯೋಗ ಸೌಧದಲ್ಲಿ ನಡೆಯಲಿರುವ ಸದರಿ ಮ್ಯಾಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಸದರಿ ಶಿಕ್ಷಕರು ಇದೆ ಮೇ 29 ರಂದು ಪೂರ್ವಾಹ್ನ 10.15ಕ್ಕೆ ತಪ್ಪದೇ ಹಾಜರಾಗಲು ಆದೇಶಿಸಿದೆ.
ಅಂದಹಾಗೆ ಜೂನ್ 3 ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಪರಿಷತ್ ಚುನಾವಣಾ ಕಾರ್ಯದಲ್ಲಿ ಅನೇಕ ಶಿಕ್ಷಕರು ತೊಡಗಿಕೊಂಡಿದ್ದಾರೆ. ಇದರ ನಡುವೆಯೂ ಮತದಾನಕ್ಕೂ ಅವಕಾಶ ಮಾಡಿಕೊಡದೇ ಶಿಕ್ಷಣ ಇಲಾಖೆಯಿಂದ ಕೆಪಿಎಸ್‌ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಿರೋದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Poll (Public Option)

Post a comment
Log in to write reviews