
ಬೆಂಗಳೂರು: ಬಾಬುಸಪಾಳ್ಯ ಕಟ್ಟಡ ದುರಂತ ಬಳಿಕ ಬಿಬಿಎಂಪಿ ಎಚ್ಚರಗೊಂಡಿದ್ದು ಬೀಳುವ ಹಂತದಲ್ಲಿದ್ದ ಮತ್ತೊಂದು ಅನಧಿಕೃತ ಕಟ್ಟಡದ ತೆರವು ಕಾರ್ಯಾಚರಣೆ ಆರಂಭವಾಗಿದೆ.
10*25 ಅಡಿಯ ಜಾಗದಲ್ಲಿ 6 ಅಂತಸ್ತಿನ ಕಟ್ಟಡವನ್ನು ಮಹಾದೇವಪುರ ವಲಯದ ಹೊರಮಾವಿನ ನಂಜಪ್ಪ ಗಾರ್ಡನ್‌ನಲ್ಲಿ ಪುಟ್ಟಪ್ಪ ಎಂಬವರು ನಿರ್ಮಿಸಿದ್ದರು. ಇಗ ಅವರೆ ಸ್ವಯಂಪ್ರೇರಿತವಾಗಿ ಮಾಲೀಕರೇ ಈಗ ಕಟ್ಟಡ ತೆರವು ಮಾಡಲು ಮುಂದಾಗಿದ್ದಾರೆ ಕಾರಣ ವಾಲಿಕೊಂಡಿರುವ ಕಟ್ಟಡವನ್ನು ತೆರವು ಮಾಡದಿದ್ದರೆ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆಯನ್ನುಬಿಬಿಎಂಪಿ ಪಾಲಿಕೆ ನೀಡಿತ್ತು. ಮಾಲೀಕರು ಸುಮಾರು 8 ಲಕ್ಷ ರೂ. ವೆಚ್ಚದಿಂದ ಕಟ್ಟಡವನ್ನು ನಿರ್ಮಾಣ ಮಾಡಿದ್ದರು. ಅದರೆ ಇಗ ಮನೆಯ ಮಾಲೀಕರೇ ಅಕ್ಕಪಕ್ಕದಲ್ಲಿ ಮನೆಗಳು ಇರುವ ಕಾರಣ ಈಗ ಕೆಲಸಗಾರರು ಸುತ್ತಿಗೆಯಿಂದ ಬಡಿದು ಕಟ್ಟಡವನ್ನು ಒಡೆಯುತ್ತಿದ್ದಾರೆ. ಮೇಲ್ಭಾಗ ಕಟ್ಟಡ ತೆರವು ಮುಗಿದ ಬಳಿಕ ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಲಾಗುತ್ತದೆ.
Poll (Public Option)

Post a comment
Log in to write reviews