
ಕೊಡಗು: ಕೊಡಗು - ಮೈಸೂರು ಗಡಿಯಲ್ಲಿ ಆನೆ ಚೌಕೂರು ಬಳಿ ಕಾಡಾನೆಯೊಂದು ಕಳೆದ ರಾತ್ರಿ ಲಾರಿ ತಡೆದು ಮನಸೋ ಇಚ್ಚೆ ತರಕಾರಿ ಭಕ್ಷಿಸಿದೆ. ಮೈಸೂರಿನಿಂದ ತರಕಾರಿ ತುಂಬಿದ ಲಾರಿಯೊಂದು ಆನೆಚೌಕೂರು ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿತ್ತು. ರಾತ್ರಿ 10.45ರ ಸುಮಾರಿಗೆ ಆನೆ ಚೌಕೂರು ಬಳಿ ಲಾರಿಗೆ ಅಡ್ಡಲಾಗಿ ಬಂದ ಒಂಟಿ ಸಲಗ ವಾಹನದ ಹಿಂಭಾಗಕ್ಕೆ ತೆರಳಿ ಟಾರ್ಪಲ್ ಎಳೆದು ಹಲವಾರು ತರಕಾರಿಗಳನ್ನ ಎಳೆದು ರಸ್ತೆಗೆ ಹಾಕಿದೆ. ಬಳಿಕ ಸುಮಾರು ಅರ್ಧಗಂಟೆಗಳ ಕಾಲ ತಿಂದು ತೇಗಿ ಅಲ್ಲಿಂದ ತೆರಳಿದೆ.
ಅರಣ್ಯಾಧಿಕಾರಿಗಳ ವಸತಿ ಗೃಹ ಅಲ್ಲೇ ಸಮೀಪದಲ್ಲೇ ಇದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ. ಸಧ್ಯ ಲಾರಿ ಚಾಲಕ ತರಕಾರಿ ಕಳೆದುಕೊಂಡು ಪರಿತಪಿಸಿದ್ದಾನೆ. ಬಳಿಕ ಉಳಿದ ತರಕಾರಿ ತೆಗೆದುಕೊಂಡು ಕೇರಳಕ್ಕೆ ತೆರಳಿದ್ದಾನೆ ಎನ್ನಲಾಗಿದೆ. ತರಕಾರಿ ಲಾರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Poll (Public Option)

Post a comment
Log in to write reviews