
ಚೆನ್ನೈ: ಹೊಸದಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಜಕೀಯ ಪಕ್ಷ ಘೋಷಿಸುವ ಮೂಲಕ ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ತಮಿಳು ಚಿತ್ರನಟ ವಿಜಯ್, ಕಳೆದ ವಾರವಷ್ಟೇ ಧ್ವಜ ಅನಾವರಣ ಮಾಡಿದ್ದರು. ಇದೇ ಧ್ವಜದ ವಿಚಾರವಾಗಿ ತಮಿಳುನಾಡು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಧ್ವಜದಲ್ಲಿ ಆನೆಗಳನ್ನು ಬಳಸಿರುವುದರ ವಿರುದ್ಧ ತಮಿಳುನಾಡು ಬಿಎಸ್‌ಪಿ ಅಧ್ಯಕ್ಷ ಆನಂದ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
‘ಟಿವಿಕೆ ಪಕ್ಷವು ಎರಡು ಆನೆಗಳಿರುವ ಚಿಹ್ನೆಯನ್ನು ತನ್ನ ಧ್ವಜದಲ್ಲಿ ಬಳಸಿದೆ. ನಮ್ಮ ರಾಷ್ಟ್ರೀಯ ಪಕ್ಷ – ಬಹುಜನ ಸಮಾಜವಾದಿ, ಈಗಾಗಲೇ ಆನೆಯನ್ನು ಬಳಸುತ್ತಿದೆ. ಆನೆ ಗುರುತು ಕೇಂದ್ರೀಯ ರಾಷ್ಟ್ರೀಯ ಪಕ್ಷಕ್ಕೆ ಮೀಸಲಾಗಿದೆ ಎಂದು ಅವರು ಈ ಕುರಿತು ಮಾಧ್ಯಮದವರಿಗೆ ತಿಳಿಸಿದ್ದಾರೆ.
Poll (Public Option)

Post a comment
Log in to write reviews